
ಮಾಸ್ಕೋ(ರಷ್ಯಾ): ಫಿಫಾ ವಿಶ್ವಕಪ್ ಗೆಲ್ಲಬೇಕು ಎಂಬ ಹೆಬ್ಬಯಕೆ ಹೊಂದಿದ್ದ ಫುಟ್ಬಾಲ್ ಜಗತ್ತಿನ ಖ್ಯಾತ ಆಟಗಾರ ಅರ್ಜೇಂಟಿನಾ ಲಿಯೋನಲ್ ಮೆಸ್ಸಿ ಕನಸು ಭಗ್ನಗೊಂಡಿದೆ.
ಫಿಫಾ ವಿಶ್ವಕಪ್ ಪಂದ್ಯಾವಳಿಯ ಡಿ ಗುಂಪಿನ ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧದ ಪಂದ್ಯದಲ್ಲಿ ಅರ್ಜೇಂಟಿನಾ 0-3 ಗೋಲುಗಳಿಂದ ಸೋಲು ಕಂಡಿದೆ. ಅರ್ಜೇಂಟಿನಾ ತಂಡದ ಖ್ಯಾತ ಆಟಗಾರ ಲಿಯೋನಲ್ ಮೆಸ್ಸಿ ಗೋಲು ಬಾರಿಸುವಲ್ಲಿ ವಿಫಲರಾಗಿದ್ದಾರೆ.
ಆಡಿರುವ ಎರಡು ಪಂದ್ಯಗಳಲ್ಲಿ ಅರ್ಜೇಂಟಿನಾ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದ್ದು ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿದೆ. ಇನ್ನೊಂದು ಪಂದ್ಯ ಬಾಕಿ ಇದ್ದು ಅದರಲ್ಲಿ ಗೆಲುವು ಸಾಧಿಸಿದರು ಉಳಿದ ಫಲಿತಾಂಶ ಅರ್ಜೇಂಟಿನಾ ಭವಿಷ್ಯವನ್ನು ನಿರ್ಧರಿಸಲಿದೆ.