ಸತತ ಬರಗಾಲ, ಎತ್ತುಗಳ‌ ಬದಲು ಸೈಕಲ್ ಬಳಕೆ

ಹುಬ್ಬಳ್ಳಿ- ಸತತ ಬರಗಾಲದಿಂದ ಕಂಗೆಟ್ಟರುವ ರೈತನೋರ್ವ, ಎತ್ತುಗಳ ಬದಲಾಗಿ, ಸೈಕಲ್ ನಿಂದಲೇ ಉಳುಮೆ ಮಾಡುತ್ತಿದ್ದಾನೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಗುಡೇನಕಟ್ಟಿ ಗ್ರಾಮದ ರೈತ ಬಸವರಾಜ ಎಂಬುವರು, ಅಂಗವೈಕಲ್ಯವನ್ನು ಮೆಟ್ಟಿನಿಂತು ಹೊಲದಲ್ಲಿ ಉಳುಮೆ ಮಾಡುತ್ತಿದ್ದಾರೆ. ಕಳೆದ‌ ಮೂರು ವರ್ಷದಿಂದ ಸಮರ್ಪಕ ಮಳೆಯಾಗದ ಕಾರಣ, ತಮ್ಮಲ್ಲಿದ್ದ ಎತ್ತುಗಳನ್ನ ಮಾರಿದ್ದೇವೆ. ಬೆಳೆ ಇರದ ಕಾರಣ ತೆಗೆದುಕೊಂಡ ಸಾಲವೂ ಹಾಗೇ ಇದೆ. ಹೀಗಾಗಿ ಮತ್ತೆ ಎತ್ತುಗಳನ್ನ ಖರೀದಿಸು ಶಕ್ತಿಇಲ್ಲ. ಹೀಗಾಗಿ ಸೈಕಲ್ ನಿಂದಲೇ ಹೊಲದ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ. ಇನ್ನೂ ಸರ್ಕಾರವು ಕೂಡ ರೈತರ ಸಮಸ್ಯೆ ಆಲಿಸುತ್ತಿಲ್ಲ. ಸಾಲಮನ್ನಾ ಮಾಡುವುದಾಗಿ ಹೇಳುತ್ತಾರೆ. ಆದರೆ, ಇದೂ ವರೆಗೂ ಸಾಲಮನ್ನಾ ಮಾಡಿಲ್ಲ. ಹೀಗಾಗಿ ರೈತರ ಬಾಳು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು ರೈತರ ಸಾಲಮನ್ನಾ ಮಾಡಬೇಕು. ರೈತರ ಬದುಕು ಹಸನಾಗಿಸಬೇಕು ಎನ್ನುತ್ತಿದ್ದಾರೆ. ಏನೆ ಆಗಲಿ ಅನ್ನ ಬೆಳೆಯುವ ರೈತನಿಗೆ ಎದುರಾದ ಸಮಸ್ಯೆಗಳು ದೂರವಾಗಲಿ ರೈತರ ಮಯಗದಲ್ಲಿತ್ತೆ ಮಂದಹಾಸ ಮೂಡಲಿ ಎಂಬುದೆ ಜನರ ಆಶಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ