ಮಂಡ್ಯ, ಜೂ.22-ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಅಂತಾರಾಜ್ಯ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಮಂಡ್ಯ ಪೆÇಲೀಸರು ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಆರ್.ಎಸ್.ಪಾಳ್ಯ ಗ್ರಾಮದ ಮಹಮ್ಮದ್ ಇಬ್ರಾಹಿಂ ಬಂಧಿತ ಆರೋಪಿ. ರಾಜ್ಯದ ವಿವಿಧ ಪ್ರಕರಣಗಳಲ್ಲಿ ಪೆÇಲೀಸರಿಗೆ ಬೇಕಾಗಿದ್ದ ಆರೋಪಿ ಮಹಮ್ಮದ್ನನ್ನು ಮಂಡ್ಯ ನಗರ ವೃತ್ತ ಮತ್ತು ಜಿಲ್ಲಾ ಅಪರಾಧ ದಳ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೆÇಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು, ಮಂಡ್ಯ ಆಜಾದ್ನಗರದ ಮುಸ್ಲಿಂ ಕಾಲೋನಿಯ ಅಹಮ್ಮದ್ ಎಂಬುವರ ಮನೆಯಲ್ಲಿ ಬಂಧಿತ ಆರೋಪಿ ಮಹಮ್ಮದ್ ಇಬ್ರಾಹಿಂ ಜ.6 ರಂದು 70 ಗ್ರಾಂ ಚಿನ್ನವನ್ನು ಕದ್ದು ಪರಾರಿಯಾಗಿದ್ದ. ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಪೆÇಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಆತನಿಂದ 560 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಮಂಡ್ಯ ಪಶ್ಚಿಮ ಠಾಣೆ, ಮಂಡ್ಯ ಸೆಂಟ್ರಲ್ ಠಾಣೆ, ಬಿಂಡಿಗನವಿಲೆ ಠಾಣೆ, ಕೆರಗೋಡು ಠಾಣೆ ಹಾಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ತುಮಕೂರಿನ ನೊಣವಿನ ಕೆರೆ ಠಾಣೆಯಲ್ಲಿ ಹಲವು ಪ್ರಕರಣ ಈತನ ವಿರುದ್ಧ ದಾಖಲಾಗಿವೆ. ಮಂಡ್ಯ ಜಿಲ್ಲೆಯಲ್ಲಿ 4, ಹಾಸನ-2, ತುಮಕೂರು-1 ಪ್ರಕರಣ ಸೇರಿದಂತೆ ರಾಜ್ಯಾದ್ಯಂತ 22ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು ಪೆÇಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಎಂದು ಎಸ್ಪಿ ಮಾಹಿತಿ ನೀಡಿದರು. ಬೀಗ ಜಡಿದ ಹಾಗೂ ಯಾರೂ ಇಲ್ಲದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ ಹೊಂಚು ಹಾಕಿ ಸಮಯ ಸಾಧಿಸಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಆರೋಪಿ ಪೆÇಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾನೆ.