ಸಿಇಡಿಯಿಂದ ಅಂತಾರಾಷ್ಟ್ರೀಯ ಎಜುಸಮಿತ್ ಮತ್ತು ಎಡ್ಯು ಸ್ಕೂಲ್ ಎಕ್ಸ್‍ಲೆನ್ಸ್ ಅವಾರ್ಡ್ ಕಾರ್ಯಕ್ರಮ

 

ಬೆಂಗಳೂರು, ಜೂ.22- ಸಿಇಡಿ (ಸೆಂಟರ್ ಫಾರ್ ಎಜ್ಯುಕೇಷನ್ ಡೆವಲಪ್‍ಮೆಂಟ್) ವತಿಯಿಂದ ನಾಲ್ಕನೆ ಅಂತಾರಾಷ್ಟ್ರೀಯ ಎಜುಸಮಿತ್ ಮತ್ತು ಎಡ್ಯು ಸ್ಕೂಲ್ ಎಕ್ಸ್‍ಲೆನ್ಸ್ ಅವಾರ್ಡ್ ಕಾರ್ಯಕ್ರಮ ಏರ್ಪಡಿಸಿದ್ದು, ವಿವಿಧ ಶಾಲಾ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ನಗರದ ಪ್ಯಾಲೆಸ್ ರಸ್ತೆಯಲ್ಲಿರುವ ಹೊಟೇಲ್ ರ್ಯಾಡಿಸನ್ ಬ್ಲ್ಯೂ, ಏಟ್ರಿಯಾದಲ್ಲಿ ಇಂದು ಬೆಳಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿನೊ ರೋಬೋಟ್‍ಗಳು ಅತಿಥಿಗಳನ್ನು ಸ್ವಾಗತಿಸಿದ್ದುದು ವಿಶೇಷವಾಗಿತ್ತು. ನಾಳೆ ಕೂಡ ವಿಚಾರಗೋಷ್ಠಿ ಸಂವಾದ, ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.

ಇದೇ ವೇಳೆ ಶಾಲಾ ವಿದ್ಯಾರ್ಥಿಗಳ ಪ್ರಗತಿ ಹಾಗೂ ಭವಿಷ್ಯದ ದೃಷ್ಟಿಯಿಂದ ಬಿಬಿಎಂಪಿ ಶಾಲೆಗಳನ್ನು ದತ್ತು ಪಡೆಯಲು ಸಿಇಡಿ ತೀರ್ಮಾನಿಸಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೇಯರ್ ಸಂಪತ್‍ರಾಜ್ ಇದನ್ನು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದರಲ್ಲದೆ ಪಾಲಿಕೆಯಿಂದ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಬಗ್ಗೆ ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.
ಶಾಲಾ ಮಕ್ಕಳು ತಾವು ತಯಾರಿಸಿದ್ದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು.
ಶಾಲಾ ನಾಯಕರಿಗಾಗಿ ಕೃತಕ ಬುದ್ಧಿಮತ್ತೆ ಯುಗ ಮತ್ತು ಯಂತ್ರ ಕಲಿಕೆಯ ಸವಾಲುಗಳು ಕುರಿತು ಅಂತಾರಾಷ್ಟ್ರೀಯ ಎಜುಸಮಿತ್‍ನಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿದೆ.
ಶಾಲಾ ಶಿಕ್ಷಣದ ಹೊಸ ದೃಷ್ಟಿಕೋನ ಮತ್ತು ವಿದ್ಯಾರ್ಥಿಗಳನ್ನು ಕ್ರಿಯಾಶೀಲವಾಗಿ ರೂಪಿಸುವ ಆಶಯದೊಂದಿಗೆ, ಪ್ರಾಂಶುಪಾಲರ ವೇದಿಕೆ ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣ, ಸಮ್ಮೇಳನ ಮತ್ತು ಶೃಂಗಸಭೆಗಳನ್ನು ಹಮ್ಮಿಕೊಂಡಿದೆ. ದೇಶ-ವಿದೇಶಗಳ ಪ್ರಖ್ಯಾತ ಶಿಕ್ಷಣ ತಜ್ಞರು ಶೃಂಗಸಭೆಯಲ್ಲಿ ಮಾತನಾಡಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಹರ್ಷದ್, ಆಲಿಸೇಟ್, ಡೇವಿಡ್ ಕ್ಯೂನ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ