ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಒಬ್ಬ ಮತೀಯ ಹುಚ್ಚನಾಯಿ: ಗೌರಿಲಂಕೇಶ ಹತ್ಯೆ ಹೋರಾಟ ಸಮಿತಿ ಮುಖಂಡ ಬಸವರಾಜ್ ಸೂಳಿಬಾವಿ

ಗದಗ:ಜೂ-22: ಪ್ರಮೋದ್ ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಒಬ್ಬ ಮತೀಯ ಹುಚ್ಚನಾಯಿ ಎಂದು ಗೌರಿಲಂಕೇಶ ಹತ್ಯೆ ಹೋರಾಟ ಸಮಿತಿ ಮುಖಂಡ ಬಸವರಾಜ್ ಸೂಳಿಬಾವಿ ಗಂಭೀರ ಆರೋಪ ಮಾಡಿದರು.

ಗದಗನಲ್ಲಿ ಎಮ್.ಎಮ್ ಕಲಬುರಗಿ, ಗೌರಿಲಂಕೇಶ, ದಾಬಲ್ಕರ್, ಪನ್ಸಾರೆ, ಹತ್ಯಾವಿರೋಧಿ ಹೋರಾಟ ಸಮಿತಿಯಿಂದ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರನ್ನು ಹುಚ್ಚನಾಯಿಗೆ ಹೊಲಿಸುವ ಮೂಲಕ ತಮ್ಮಆಕ್ರೋಶವನ್ನು ಹೊರಹಾಕಿದರು. ಕ್ರೌರ್ಯವನ್ನು ವಿಸ್ತರಿಸುತ್ತಿರುವ ಮುತಾಲಿಕ್‌ನನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು. ಜೊತೆಗೆ ಆರ್.ಎಸ್.ಎಸ್, ಶ್ರೀರಾಮಸೇನೆ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳನ್ನ ಎಸ್.ಐ.ಟಿ ತಂಡ ವಿಚಾರಣೆಗೊಳಪಡಿಸಬೇಕು ಎಂದರು.

ದೇಶದಲ್ಲಿ ಕೇಸರಿ ಭಯೋತ್ಪಾದನೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಭಯೋತ್ಪಾದನೆ ಒಪ್ಪಿಕೊಂಡು ಅಧಿಕೃತವಾಗಿ ಘೋಷಿಸಬೇಕು. ನಕ್ಸಲ್ ನಿಗ್ರಹಪಡೆ ಮಾದರಿಯಲ್ಲಿ ಕೇಸರಿ ಭಯೋತ್ಪಾದನೆ ನಿಗ್ರಹಪಡೆ ರಚನೆಮಾಡಬೇಕು ಎಂದು ಆಗ್ರಹಿಸಿದರು. ಎಸ್.ಐ.ಟಿ ತಂಡ ಗೌರಿಲಂಕೇಶ ಹತ್ಯೆಗೆ ಸಂಬಂಧಿಸಿದ ಶಂಕಿತ ಆರೋಪಿಗಳನ್ನ ಬಂಧಿಸಿ ವಿಚಾರಣೆಗೊಳಪಡಿಸಿರುವುದು ಹೆಮ್ಮೆಯ ಸಂಗತಿ. ಅದೇ ರೀತಿ ಕಲಬುರಗಿ ಹತ್ಯೆ ಪ್ರಕರಣವನ್ನು ಸಿ.ಓ.ಡಿ ಬದಲು ಎಸ್.ಐ.ಟಿ ಗೆ ವಹಿಸುವಂತೆ ಆಗ್ರಹಿಸಿದರು.

ಗೌರಿಲಂಕೇಶ, ಎಮ್.ಎಮ್ ಕಲಬುರಗಿ ಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳು ಹಾಗೂ ಆ ಸಂಘಟನೆಗಳು ಯಾವುದು ಎಂದು ದೃಡಪಡಿಸಿ ಬಹಿರಂಗಗೊಳಿಸಬೇಕು ಎಂದರು.

ಸುದ್ಧಿಗೋಷ್ಠಿಯಲ್ಲಿ ಎಡಪಂಥೀಯ ಅನೇಕ ವಿಚಾರವಾದಿಗಳು ಭಾಗವಹಿಸಿದ್ದರು.

shrirama sene,pramod mutalik,basavaraj sulibavi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ