
ಮಾಸ್ಕೋ(ರಷ್ಯಾ): ಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಪಂದ್ಯವನ್ನು ಗೆಲ್ಲುವ ಮೂಲಕ ಮೊದಲ ಆಫ್ರಿಕನ್ ರಾಷ್ಟ್ರ ಎಂಬ ಖ್ಯಾತಿಗೆ ಸೆನೆಗಲ್ ಭಾಜನವಾಗಿದೆ.
ಪೋಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸೆನೆಗಲ್ 2-1 ಗೋಲಿನಿಂದ ಐತಿಹಾಸಿಕ ಗೆಲುವು ಸಾಧಿಸಿದೆ. ಸೆನೆಗಲ್ ಪರ ಥಿಯಗೊ ಸಿಯೋನೆಕ್ ಮತ್ತು ಬೇಯ್ ನಿಯಾಂಗ್ ತಲಾ ಒಂದು ಗೋಲು ಬಾರಿಸಿದ್ದಾರೆ.
ಪೋಲ್ಯಾಂಡ್ ಪರ ಗ್ರಾಜ್ಗೋರ್ಜ್ ಕ್ರೈಚೋವಿಕ್ ಒಂದು ಗೋಲು ಬಾರಿಸಿದ್ದಾರೆ.