ಡೆಹ್ರಾಡೂನ್‌ನಲ್ಲಿ ಪ್ರಧಾನಿ ಮೋದಿ ಯೋಗ; 55 ಸಾವಿರ ಉತ್ಸಾಹಿಗಳು ಭಾಗಿ

ಡೆಹ್ರಾಡೂನ್‌: ಅಂತರರಾಷ್ಟ್ರೀಯ ಮನ್ನಣೆ ಪಡೆದುಕೊಂಡಿರುವ ಯೋಗವನ್ನು ಜಗತ್ತಿನಾದ್ಯಂತ ಗುರುವಾರ ಆಚರಿಸಲಾಗುತ್ತಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಪ್ರಧಾನಿ ಮೋದಿ ನಾಲ್ಕನೇ ಅಂತರರಾಷ್ಟ್ರೀಯ ಯೋಗ ದಿನಾ

ಚರಣೆಯಲ್ಲಿ ಆಸನಗಳನ್ನು ಪ್ರದರ್ಶಿಸಿದರು.

ಫಾರೆಸ್ಟ್‌ ಇನ್‌ಸ್ಟಿಟ್ಯೂಟ್‌ ಗ್ರೌಂಡ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ 55 ಸಾವಿರ ಉತ್ಸಾಹಿಗಳೊಂದಿಗೆ ಪ್ರಧಾನಿ ಯೋಗ ಆಸನಗಳ ಪ್ರದರ್ಶನದಲ್ಲಿ ಭಾಗಿಯಾದರು.

ಜಗತ್ತಿನ ಅತಿ ದೊಡ್ಡ ಸಾಮೂಹಿಕ ಚಳವಳಿಯಾಗಿ ಬೆಳೆದಿರುವ

ಯೋಗಕ್ಕೆ ಇಡೀ ಜಗತ್ತನೇ ಒಂದು ಗೂಡಿಸುವ ಶಕ್ತಿಯಿದೆ. ಟೋಕಿಯೋದಿಂದ ಟೊರಾಂಟೊ, ಶಾಂಘೈನಿಂದ ಚಿಕಾಗೊ, ಸ್ಟಾಕ್‌ಹೋಮ್‌ನಿಂದ ಸಾವೊಪೌಲೊ ಸೇರಿ ವಿಶ್ವದ ಎಲ್ಲೆಡೆ

ಯೂ ಯೋಗ ಆಚರಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಹಿಂದಿನ, ಈಗಿನ ಹಾಗೂ ಮುಂದಿನ ಭರವಸೆಯೇ ಯೋಗ. ಪ್ರತಿ ವರ್ಷ ಜಗತ್ತಿನಲ್ಲಿ 180 ಲಕ್ಷ ಜನರು ಹೃದಯ ಸಂಬಂಧಿ ಕಾಯಿಲೆಗೆ ಹಾಗೂ 16 ಲಕ್ಷ ಮಂದಿ ಡಯಾಬಿಟಿಸ್‌ಗೆ ಒಳಗಾಗುತ್ತಿದ್ದಾರೆ. ಯೋಗ ಅಭ್ಯಾಸ ಮಾಡುವುದರಿಂದ ರೋಗದಿಂದ ಮುಕ್ತಿ ಪಡೆಯಬಹುದು, ಆರೋಗ್ಯ ಸುಧಾರಣೆಯಿಂದ ವೈದ್ಯಕೀಯ ಖರ್ಚು ಕೂಡ ಕಡಿಮೆ ಮಾಡಬಹುದು’ ಎಂದು ಸಲಹೆ ನೀಡಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ