ಹೊಸದಿಲ್ಲಿ: ವಿಶ್ವಾದ್ಯಂತ 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗಾಸನಗಳ ಮೂಲಕ ಆಚರಿಸಲಾಗುತ್ತಿದೆ. ಗುರುವಾರ ಬೆಳಗ್ಗಿನಿಂದಲೆ ವಿಶ್ವದ ವಿವಿಧೆಡೆ ಗಣ್ಯಾತೀಗಣ್ಯರು , ಜನಪ್ರತಿನಿಧಿಗಳು , ವಿದ್ಯಾರ್ಥಿಗಳು ಯೋಗಾಸನಗಳನ್ನು ಮಾಡಿ ಗಮನ ಸೆಳೆದಿದ್ದಾರೆ.
ವಿಶೇಷ ವೆಂದರೆ ಭಾರತೀಯ ಐಟಿಬಿಪಿ ಯೋಧರು 18,000 ಮೀಟರ್ ಎತ್ತರದ ಲಡಾಕ್ನ ಹಿಮಗುಡ್ಡೆಗಳ ಮೇಲೆ ಸೂರ್ಯನಮಸ್ಕಾರಗಳನ್ನು ಮಾಡಿದ್ದಾರೆ. ಈ ಚಿತ್ರಗಳನ್ನು ಆಯುಷ್ ಸಚಿವಾಲಯ ಪೋಸ್ಟ್ ಮಾಡಿದೆ.
ಅರುಣಾಚಲದ ಲೋಹಿತ್ಪುರ್ನಲ್ಲಿ ಐಟಿಪಿಬಿ ಯೋಧರ ತಂಡ ದಿಗಾರು ನದಿಯಲ್ಲಿ ಯೋಗಾಸನಗಳನ್ನು ಮಾಡಿದ್ದಾರೆ.
ವಿಶಾಖಪಟ್ಟಣಂನಲ್ಲಿ ನೌಕಾಪಡೆಯ ಯೋಧರು ಐಎನ್ಎಸ್ ಜ್ಯೋತಿ ನೌಕೆಯಲ್ಲಿ ವಿಶೇಷ ಆಸನಗಳನ್ನು ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಡೆಹರಾಡೂನ್ನ ಅರಣ್ಯ ಸಂಶೋಧನಾ ಕೇಂದ್ರದ ಆವರಣದಲ್ಲಿ 50,000 ಕ್ಕೂ ಹೆಚ್ಚು ಜನರೊಂದಿಗೆ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಾಸನಗಳನ್ನು ಮಾಡಿದರು.
ವಿವಿಧ ಸಂಘ ಸಂಸೆœಗಳು, ಮಠ, ಮಂದಿರಗಳು , ಶಾಲಾ ಕಾಲೇಜುಗಳು ಸಾಮೂಹಿಕ ಯೋಗಾಸನಗಳನ್ನು ಮಾಡಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿವೆ.