ನಾನ್ಯಾರಿಗೂ ಫಿಟ್ನೆಸ್ ಚಾಲೆಂಜ್ ಹಾಕಲ್ಲ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

ಬೆಂಗಳೂರು: ವಿಶ್ವಯೋಗ ದಿನಾಚರಣೆಯ ಅಂಗವಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, ಪ್ರಧಾನಿ ಮೋದಿಯವರು ಫಿಟ್ ನೆಸ್ ಚಾಲೆಂಜ್ ಗೆ ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮರಾ ಮುಂದೆ ಯೋಗ ಮಾಡಿದ್ದಾರೆ. ಯೋಗ ಗುರು ಕಾರ್ತಿಕ್ ಮಾರ್ಗದರ್ಶನದಲ್ಲಿ ದೇವೇಗೌಡರು ಯೋಗ ಮಾಡಿದ್ದಾರೆ.

ಅದ್ಯಾರೋ ಚೇಂಬರ್ ಆಫ್ ಕಾಮರ್ಸ್ ನವರು ಬಂದು ಪ್ಯಾಲೇಸ್ ಗ್ರೌಂಡ್ ನಲ್ಲಿ ಯೋಗಾ ಡೇ ಮಾಡ್ತೀವಿ ಎಂದರು. ನೀವು ಬರಬೇಕು ಎಂದು ಆಹ್ವಾನ ನೀಡಿದ್ದರು. ನಾನು ಯಾವಾಗ ನಾನೇ ಯೋಗ ಮಾಡ್ತೀನಿ ಎಂದು ಹೇಳಿದ್ನೋ, ಅವರು ವಾಪಸ್ ಬರಲೇ ಇಲ್ಲ. ಬಹುಶಃ ಮೋದಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕ್ತೀನಿ ಅಂತ. ಆದರೆ ನಾನು ಯಾರಿಗೂ ಚಾಲೆಂಜ್ ಹಾಕಲ್ಲ ಎಂದು ಯೋಗ ಮಾಡುತ್ತಲೇ ಎಚ್ ಡಿಡಿ ಹೇಳಿದ್ದಾರೆ.

ಇಂದು ವಿಶ್ವ ಯೋಗ ದಿನಾಚರಣೆ. ಮೂರು ವರ್ಷದಿಂದ ಪ್ರಧಾನಿ ಮೋದಿ ಈ ದಿನಾಚರಣೆಯನ್ನು ಆಚರಣೆಗೆ ತಂದಿದ್ದಾರೆ. ಮೋದಿ ಈಗ ಯೋಗಕ್ಕೆ ಒಂದು ಸ್ವರೂಪ ನೀಡಿದ್ದಾರೆ. ಹಿಂದೆ ಋಷಿ-ಮುನಿಗಳು ತಮ್ಮ ಆರೋಗ್ಯವನ್ನು ಯೋಗದಿಂದ ಕಾಪಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರು 100, 200 ವರ್ಷಗಳ ಕಾಲ ಬದುಕುತ್ತಿದ್ದರು. ಈಗಲೂ ಇಂತಹ ಸಾಧಕರು ಹಿಮಾಲಯದಲ್ಲಿ ಬದುಕಿದ್ದಾರೆ. ಇದು ಸತ್ಯ ಎಂದು ಯೋಗ ಬಳಿಕ ಅವರು ಹೇಳಿದ್ರು.

ನಾನು ಆರೋಗ್ಯ ಕಾಪಾಡಲು ನನ್ನದೇ ಆದ ಕೆಲವೊಂದು ನಿಯಮಗಳನ್ನು ಇಟ್ಟುಕೊಂಡಿದ್ದೇನೆ. ಯೋಗದ ಜೊತೆ ಆಹಾರ ಪದ್ಧತಿಯನ್ನು ಕೂಡ ಅಳವಡಿಸಿಕೊಂಡಿದ್ದೇನೆ. ಆದುದರಿಂದ ನಾನು ಇನ್ನು ಕೆಲಸ ಮಾಡುವ ಮತ್ತು ದುಡಿಮೆ ಮಾಡುವ ಆಸಕ್ತಿ ಇದೆ. ಪ್ರಧಾನಿ ಮೋದಿ ಅವರು ಯೋಗಕ್ಕೆ ಒಂದು ಸ್ವರೂಪ ಕೊಟ್ಟಿದ್ದಾರೆ. ಯೋಗ ನಮಗೆ ಹೊಸದಾಗಿ ಬಂದಿರೋದಲ್ಲ. ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಇನ್ನು ಅನೇಕರು ಯೋಗ ಮಾಡುತ್ತಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ