ವಾಷಿಂಗ್ಟನ್, ಜೂ.21- ಈ ಪ್ರಕೃತಿ ವಿಸ್ಮಯಕಾರಿ ಹಾಗೂ ಅಷ್ಟೇ ಅಪಾಯಕಾರಿಯ ಒಡಲು. ಚರ್ಮವನ್ನು ಸುಡಬಲ್ಲ ಮತ್ತು ಅಂಧತ್ವಕ್ಕೆ ಕಾರಣವಾಗಬಲ್ಲ ದೈತ್ಯ ಮರವೊಂದು ಅಮೆರಿಕದ ವರ್ಜೀನಿಯಾ ಪ್ರಾಂತ್ಯದಲ್ಲಿ ಈಗ ದೊಡ್ಡಮಟ್ಟದ ಆತಂಕಕ್ಕೆ ಕಾರಣವಾಗಿದೆ.
ಹಾಗ್ವೀಡ್ ಎಂಬ ದೈತ್ಯ ವೃಕ್ಷವನ್ನು ಮುಟ್ಟಿದರೆ ಚರ್ಮ ಸುಟ್ಟು ಕಪ್ಪಾಗುವುದಲ್ಲದೆ, ನಿಮ್ಮ ಅಮೂಲ್ಯ ದೃಷ್ಟಿ ನಶಿಸುತ್ತದೆ. ಈ ಮರವನ್ನು ಯಾವುದೇ ಕಾರಣಕ್ಕೂ ಮುಟ್ಟದಮತೆ ವರ್ಜೀನಿಯಾದ ಸಾರ್ವಜನಿಕರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಹಾಗ್ವೀಡ್ ವನ ಬಣ್ಣವಿಲ್ಲದ ಮತ್ತು ನೀರಿನಂಥ ದ್ರವ ಹೊಂದಿದೆ. ಅದು ಚರ್ಮವನ್ನು ಸುಡುತ್ತದೆ ಮತ್ತು ಗಾಢ ಕಲೆಗಳು ಉಂಟಾಗುತ್ತವೆ. ಇದನ್ನು ಮುಟ್ಟಿದರೆ ಅಥವಾ ದ್ರವ ಕಣ್ಣಿನ ಸಂಪರ್ಕಕ್ಕೆ ಬಂದರೆ ದೃಷ್ಟಿ ನಶಿಸುತ್ತದೆ. ಈ ಮರವನ್ನು ಅಗತ್ಯ ರಕ್ಷಣಾ ಕವಚ ಇಲ್ಲದೆ ಮುಟ್ಟಬಾರದು.