ವಿಶ್ವಕಪ್ ಫುಟ್ಬಾಲ್-2018ರ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ ಸ್ಪೇನ್ ಇರಾನ್ ವಿರುದ್ಧ ಜಯ

ಕಜಾನ್, ಜೂ.21-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್-2018ರ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ ಸ್ಪೇನ್ ಇರಾನ್ ವಿರುದ್ಧ ಜಯ ಸಾಧಿಸಿದೆ.
ಕಜಾನ್ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಹಣಾಹಣಿಯಲ್ಲಿ ಇರಾನ್ ವಿರುದ್ಧ ಸ್ಪೇನ್ 1-0 ಗೋಲಿನಿಂದ ವಿಜಯಿಯಾಯಿತು. ಸ್ಪೇನ್ ಪರ ಡಿಗೋ ಕೋಸ್ಟಾ 54ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ಸುಲಭವಾಗಿ ದಕ್ಕಿದ ಗೋಲಿನಿಂದಾಗಿ ಸ್ಪೇನ್ ಫಿಫಾ ಫುಟ್ಬಾಲ್ ಮಹಾಸಮರದಲ್ಲಿ ಮೊದಲ ಜಯ ದಾಖಲಿಸಿತು. ಪ್ರಥಮ ಪಂದ್ಯದಲ್ಲಿ ಪೆÇೀರ್ಚುಗಲ್ ವಿರುದ್ಧ ಡ್ರಾಗೆ ಸಮಾಧಾನಪಟ್ಟಿದ್ದ ಸ್ಪೇನ್ ಎರಡನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಈ ಮೂಲಕ ಬಿ ಗುಂಪಿನಲ್ಲಿ ಅಗ್ರ ಸ್ಥಾನಕ್ಕೇರಿದ ಈ ತಂಡವು 16ರ ಹಂತದ(ಪ್ರಿಕ್ವಾರ್ಟರ್) ಸಮೀಪಕ್ಕೆ ಬಂದಿದೆ.
ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವೆ ಭಾರೀ ಪೈಪೆÇೀಟಿ ನಡೆದು ಕ್ರೀಡಾಪ್ರೇಮಿಗಳ ಗಮನಸೆಳೆಯಿತು. ಮೊದಲಾರ್ಧದಲ್ಲಿ ಗೋಲುಗಳನ್ನು ಗಳಿಸಿವ ಅವಕಾಶ ಸ್ಪೇನ್‍ಗೆ ಲಭಿಸಿದ್ದರೂ, ಅದ ಇರಾನ್‍ನ ಆಕ್ರಮಣಕಾರಿ ಪ್ರತಿರೋಧದಿಂದ ಸಾಧ್ಯವಾಗಲಿಲ್ಲ. ಬಲಿಷ್ಠ ಸ್ಪೇನ್ ಎದುರು ಇರಾನ್ ಆಟಗಾರರು ತಮ್ಮ ಸಾಮಥ್ರ್ಯ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದರು.
ಗೋಲು ರಹಿತ ಮೊದಲಾರ್ಧದ ನಂತರ ಸ್ಪೇನ್ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ತಂತ್ರ ಅನುಸರಿಸಿತು. 54ನೇ ನಿಮಿಷದಲ್ಲಿ ಡಿಗೋ ಕೋಸ್ಟಾ ಚೆಂಡನ್ನು ಯಶಸ್ವಿಯಾಗಿ ಗೋಲ್ ಬಾಕ್ಸ್‍ಗೆ ಸೇರಿಸಿದರು.
64ನೇ ನಿಮಿಷದಲ್ಲಿ ದೊರೆತ ಪ್ರಿ-ಕಿಕ್‍ನನ್ನು ಇರಾನ್ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಇರಾನ್‍ನ ಎಜತೊಲಾಯಿ ಗೋಲು ಗಳಿಸಲು ವಿಫಲರಾದರು. ಇದಾದ ನಂತರ ಪಂದ್ಯದುದ್ದಕ್ಕೂ ಉತ್ತಮ ಪ್ರಾಬಲ್ಯ ಸಾಧಿಸಿದ ಸ್ಪೇನ್ ಜಯ ಸಾಧಿಸಿತು. ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲಿ ಐರೋಪ್ಯ ದೇಶಗಳ ತಂಡಗಳ ವಿರುದ್ಧ ಇರಾನ್ ಈವರೆಗೆ ಜಯ ಸಾಧಿಸಿಲ್ಲ. ಇರಾನ್ ಸ್ಪೇನ್ ವಿರುದ್ದ 20 ಬಾರಿ ಮುಖಾಮುಖಿಯಾಗಿದೆ. ಆದರೆ ಡ್ರಾ ಮಾಡಿಕೊಂಡಿದ್ದು 1954ರಲ್ಲಿ ಮಾತ್ರ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ