ರಾಜ್ಯ ವಿಧಾನಪರಿಷತ್ ರದ್ದುಗೊಳಿಸಬೇಕು: ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ

Varta Mitra News

 

ಬೆಂಗಳೂರು, ಜೂ.21- ರಾಜ್ಯದ ಅಭಿವೃದ್ದಿಗೆ ಯಾವ ರೀತಿಯಿಂದಲೂ ಪ್ರಯೋಜನವಿಲ್ಲದ ರಾಜ್ಯ ವಿಧಾನಪರಿಷತ್‍ನ್ನು ರದ್ದುಗೊಳಿಸಬೇಕೆಂದು ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದುವರೆಗೂ ಭಾರತದ 7 ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್‍ನ ಕಾರ್ಯ ನಿರ್ವಹಿಸುತ್ತಿವೆ. 1956ರಿಂದಲೇ ಕರ್ನಾಟಕ ವಿಧಾನಪರಿಷತ್ ಕಾರ್ಯ ಆರಂಭಿಸಿದೆ.
ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗುವ ಹಾಗೂ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಒಟ್ಟು 75 ಜನ ಸದಸ್ಯರು ವಿಧಾನಪರಿಷತ್‍ನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ವಿಧಾನಪರಿಷತ್ ನೌಕರರ ಹಾಗೂ ಸದಸ್ಯರ ನಿರ್ವಹಣೆಗಾಗಿ 75 ಕೋಟಿ ರೂ.ಗಳನ್ನು ಬಳಸಿಕೊಳ್ಳಲಾಗುತ್ತಿದೆ. ವಿಧಾನಪರಿಷತ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಸಹಕಾರಿಯಲ್ಲ ಎಂದು ತಿಳಿಸಿದರು.
ವಿವಿಧ ರಾಜಕೀಯ ಪಕ್ಷಗಳಲ್ಲಿ ವಿಧಾನಸಭೆ ಸ್ಪರ್ಧಿಸಿ ಸಾಕಷ್ಟು ಜನ ಆಯ್ಕೆಯಾಗುತ್ತಿದ್ದಾರೆ. ಈ ಚುನಾವಣೆಯಲ್ಲಿ ಸೋತ ರಾಜಕೀಯ ವ್ಯಕ್ತಿಗಳಿಗೆ ಸೂಕ್ತ ಸ್ಥಾನ ಕಲ್ಪಿಸುವ ಉದ್ದೇಶಕ್ಕೆ ಮಾತ್ರ ವಿಧಾನಪರಿಷತ್‍ನ್ನು ರಾಜಕೀಯ ನಾಯಕರು ಸೀಮಿತಗೊಳಿಸಿದ್ದಾರೆ. ನಾಮನಿರ್ದೇಶನದ ಮೂಲಕ ಕೆಲಸಕ್ಕೆ ಬಾರದ ವ್ಯಕ್ತಿಗಳನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗುತ್ತಿದೆ ಎಂದರು.
22 ರಾಜ್ಯಗಳಲ್ಲಿ ಅವಶ್ಯಕತೆ ಇಲ್ಲದ ವಿಧಾನಪರಿಷತ್ 7 ರಾಜ್ಯಗಳಿಗೆ ಏಕೆ ಬೇಕು, ಕಾರಣ, ಪ್ರಯೋಜನವಿಲ್ಲದ ಅನಗತ್ಯ ವೆಚ್ಚಕ್ಕೆ ಕಾರಣವಾಗಿರುವ ವಿಧಾನಪರಿಷತ್‍ನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ