ಗೌರಿಲಂಕೇಶ ಹತ್ಯೆ ಪೂರ್ವಾಗ್ರಹ ಆರೋಪ: ಜೋಶಿ

ಹುಬ್ಬಳ್ಳಿ : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಬಂಧಿಸದಂತೆ ಕೆಲ ಮೇಲೆ ಪೂರ್ವಾಗ್ರಹ ಪೀಡಿತವಾಗಿ ಆರೋಪ ಮಾಡಲಾಗಿತ್ತೆಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪತ್ರಿಕ್ರಿಯಿಸಿದ ಅವರು, ಗೌರಿ ಲಂಕೇಶ್ ಹಾಗೂ ಡಾ.ಎಂ‌ ಎಂ ಕಲಬುರ್ಗಿ ಹತ್ಯೆ ಬಳಿಕ ವೈಚಾರಿಕ ಹತ್ಯೆ ಎಂದು ಬಿಂಬಿಸಲಾಯಿತು. ಈ ದೃಷ್ಟಿಕೋನದಲ್ಲಿ ಮಾತ್ರ ಸಿಐಡಿ ತನಿಖೆ ಕೈಗೊಂಡಿದೆ. ನಕ್ಸಲೈಟ್ ಆ್ಯಂಗಲ್ ನಲ್ಲಿ ತನಿಖೆ ನಡೆದೇ ಇಲ್ಲ ಎಂದರು. ಯಾಕಂದ್ರೆ, ನಕ್ಸಲೈಟ್ ಜತೆಗೆ ಗೌರಿ ಲಂಕೇಶ್ ಸಹ ಕೆಲ ಭಿನ್ನಾಭಿಪ್ರಾಯ ಹೊಂದಿದ್ರು. ಆದರೆ, ನೇರವಾಗಿ ಒಂದು ಸಂಘಟನೆಯನ್ನ ಫಿಟ್ ಮಾಡಲಾಗ್ತಿದೆ. ಸರ್ಕಾರ ಸಿಐಡಿ ಪೊಲೀಸರ ಮೂಲಕ ಪ್ರೀ ಜಡ್ಜ್ ಮಾಡೋ ಯತ್ನ ಮಾಡ್ತಿದೆ ಎಂದು ಆರೋಪ‌ಮಾಡಿದ್ರು. ಗೌರಿ ಲಂಕೇಶ್ ಹತ್ಯೆ ಬಳಿಕ ಬಲಪಂಥೀಯರೇ ಈ ಹತ್ಯೆ ಮಾಡಿದ್ದಾರೆಂದು ಪ್ರಕಾಶ್ ರೈ ಆರೋಪಿಸಿದ್ರು. ಆದರೆ, ಇಂದು ಸತ್ಯ ಹಿರಬಂದಿದೆ. ಒಂದು ವೇಳೆ ಗೌರಿ ಹತ್ಯೆಯನ್ನ ಈಗ ಸಿಐಡಿ ವಶದಲ್ಲಿರೋ ಆರೋಪಿಗಳೇ ಇರಲಿ ಅಥವಾ ಯಾರೇ ಮಾಡಿದ್ರೂ ಅವರಿಗೆ ತಕ್ಕ ಶಿಕ್ಷೆಯಾಗಲಿ ಸಂಸದ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ