ಸಮರ್ಪಕವಾಗಿ ಪಡಿತರ ಧಾನ್ಯ ವಿತರಣೆಯಾಗಿಲ್ಲ ಎಂದು ಸಾರ್ವಜನಿಕರಿಂದ ಪ್ರತಿಭಟನೆ

ದೊಡ್ಡಬಳ್ಳಾಪುರ:ಕಳೆದ ಮೂರು ತಿಂಗಳಿನಿಂದ ಸಮರ್ಪಕವಾಗಿ ಪಡಿತರ ನೀಡದೆ ಇರುವ ಕಾರಣ ತೂಬಗೆರೆ ಗ್ರಾಮದ ನ್ಯಾಯ ಬೆಲೆ ಅಂಗಡಿ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಹೋಬಳಿಯಲ್ಲಿರುವ ಹಲವು ಗ್ರಾಮಗಳಲ್ಲಿಸುಮಾರು 2200 ಪಡಿತರ ಚೀಟಿಗಳಿದ್ದು ತೂಬಗೆರೆ ರೈತರ ಸೇವಾ ಸಹಕಾರ ಸಂಘದ (ವಿಎಸ್ ಎಸ್ ಎನ್) ವತಿಯಿಂದಲೆ ಪಡಿತರ ವಿತರಣೆ ಮಾಡಲಾಗುತ್ತಿದೆ ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ಪ್ರತಿ ತಿಂಗಳು ಸಮರ್ಪಕವಾಗಿ ಪಡಿತರ ವಿತರಣೆ ಮಾಡುವುದಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು
ಅಲ್ಲದ ತಿಂಗಳಿನಲ್ಲಿ ಕೆಲ ರಜಾ ದಿನಗಳನ್ನು ಹೊರತು ಪಡಿಸಿ ತಿಂಗಳು ಪೂರ್ತಿ ಪಡಿತರ ವಿತರಣೆ ಮಾಡಬೇಕು ಎಂದು ಸರ್ಕಾರ ಆದೇಶವಿದೆ ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ತಿಂಗಳಿನಲ್ಲಿ ಎರಡು ದಿನ ಮಾತ್ರ ಪಡಿತರ ವಿತರಿಸುತ್ತಾರೆ ಹಾಗೂ ಗ್ರಾಹಕರಿಂದ ಪಡಿತರ ದರಕ್ಕಿಂತ ಹೆಚ್ಚಾಗಿ ಐದು ಹತ್ತು ರೂಪಾಯಿ ಹೆಚ್ಚು ಹಣ ಪಡೆಯುತ್ತಾರೆ ಇದನ್ನು ಪ್ರಶ್ನಿಸಿದರೆ ಅಕ್ಕಿ ಹಳೆಯುವ ಸಿಬ್ಬಂದಿಗೆ ಸಂಬಳ ಮತ್ತು ಅಂಗಡಿ ಬಾಡಿಗೆ ಎಲ್ಲ ಇದರಿಂದಲೆ ನೀಡಬೇಕು ಎಂದು ಸಮಜಾಯಿಷಿ ನೀಡುತ್ತಾರೆ ಇನ್ನೂ ಹೆಚ್ಚು ಪ್ರಶ್ನಿಸಿದರೆ ಪೆÇಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಒಡ್ಡುತ್ತಾರೆ ಎಂದರು.
ಸರ್ಕಾರ ಅಕ್ರಮ ಪಡಿತರ ಚೀಟಿಗಳನ್ನು ತಡೆಗಟ್ಟಿ ವಾರಸುದಾರನಿಗೆ ಮಾತ್ರ ಪಡಿತರ ವಿತರಿಸಬೇಕು ಎನ್ನುವ ನಿಟ್ಟಿನಲ್ಲಿ ಪಡಿತರ ಚೀಟಿಯಲ್ಲಿರುವ ಕುಟುಂಬದ ಸದಸ್ಯರೊಬ್ಬರು ನ್ಯಾಯಬೆಲೆ ಅಂಗಡಿಗೆ ತೆರಳಿ ಹೆಬ್ಬೆಟ್ಟಿನ (ಥಂಬಿಂಗ್)ಗುರುತು ನೀಡಿ ಪಡಿತರ ಪಡೆಯುವ ವ್ಯವಸ್ಥೆ ಮಾಡಿದೆ ಆದರೆ ಇಲ್ಲ್ಲಿನ ಸಿಬ್ಬಂದಿ ಪಡಿತರ ವಿತರಿಸುವ ಒಂದು ವಾರದ ಮುಂಚೇಯೆ ಹೆಬ್ಬೆಟ್ಟಿನ ಗುರುತು ಪಡೆದುಕೊಂದು ಹೋಗುತ್ತಾರೆ ಆದರೆ ಪಡಿತರ ಧಾನ್ಯಗಳನ್ನು ವಿತರಿಸುವುದಿಲ್ಲ ಎಂದು ಆರೋಪಿಸಿದರು
ಪ್ರತಿಭಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕು ತಹಸಿಲ್ದಾರ್ ಬಿ.ಎ. ಮೋಹನ್ ಆಗಮಿಸುತ್ತಿರುವ ವಿಷಯ ತಿಳಿದ ಕೂಡಲೆ ನ್ಯಾಯಬೆಲೆ ಅಂಗಡಿ ರಾಮೂರ್ತಿ ಮತ್ತು ಸಿಬ್ಬಂದಿ ಅಂಗಡಿ ಬಂದ್ ಮಾಡಿ ಪರಾರಿಯಾದರು ಸ್ಥಳಕ್ಕಾಗಿಮಿಸಿದ ತಹಸಿಲ್ದಾರ್ ಬಿ.ಎ.ಮೋಹನ್ ವಿತರಕ ರಾಮೂರ್ತಿಗೆ ಕರೆ ಮಾಡಿ ಮಾತನಾಡಿ ಕೂಡಲೆ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದರು ಇದಕ್ಕೆ ಪ್ರತಿಕ್ರಿಯಿಸಿದ ರಾಮೂರ್ತಿ ನನಗೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಾಲಾಗಿದ್ದೇನೆ ಎಂದು ಕುಂಟು ನೆಪ ಹೇಳಿ ಕರೆ ಸ್ಥಗಿತಗೊಳಿಸಿದರು ಇದರಿಂದ ತಹಸಿಲ್ದಾರ್ ಮೋಹನ್ ನ್ಯಾಯಬೆಲೆ ಅಂಗಡಿಯ ಬೀಗ ಒಡೆಸಿ ಒಳ ಪ್ರವೇಶಿಸಿ ನೋಡಿದಾಗ ಪಡಿತರ ಧಾನ್ಯಗಳಿಲ್ಲದೆ ಖಾಲಿ ಒಡೆಯುತ್ತಿತ್ತು ಇದನ್ನು ಕಂಡ ತಹಸಿಲ್ದಾರ್ ಮೋಹನ್ ಅವರು ಸಿಬ್ಬಂದಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಪ್ರತಿಭಟನಾ ಕಾರರಿಗೆ ತಿಳಿಸಿದರು ಅಲ್ಲದೆ ಒಂದು ವಾರದ ಒಳಗೆ ಸಮಸ್ಯೆ ಸರಿಪಡಿಸಿ ಇನ್ನು ಮುಂದೆ ಈ ರೀತಿಯಾಗದಂತೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ