ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲೂಕಿನ ಕೊಡದವಾಡಿ ಗ್ರಾಮದ ಅಂಗಡಿಯೊಂದರ ಬಳಿ ಸ್ಫೋಟಕ ವಸ್ತುಗಳ ಬಿಳಿ ಪತ್ತೆಯಾಗಿದ್ಫ್ದು ಗ್ರಾಮದ ಜನತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಚೀಟಿಯಲ್ಲಿ ಹಲವಾರು ಹೆಸರುಗಳು ಬರೆದಿರುವುದರಿಂದ ಗ್ರಾಮದ ಕೆ.ಎನ್ ಸುರೇಶ್ ಬೆಳಗ್ಗೆ ಅಂಗಡಿಯ ಷಟರ್ ಬಾಗಿಲು ತೆರೆಯಲು ಹೋದಾಗ ಡೋರ್ ಬಳಿ ಸಿಕ್ಕಿದ ಚೀಟಿಯಲ್ಲಿ ಬಾಂಬುಗಳು ಇಟ್ಟಿರುವ ಸ್ಥಳಗಳ ಬಗ್ಗೆ ಕೆಲವರ ಹೆಸರಿನ ಪಕ್ಕದಲ್ಲಿ ಹಣದ ಬಗ್ಗೆ ಪ್ರಸ್ತಾಪ ಮಾಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು.
ಚೀಟಿಯನ್ನು ಕಂಡು ಕೂಡಲೇ ಸುರೇಶ್ ಅನುಮಾನ ಬಂದ ಕೂಡಲೇ ಅವರ ಅಂಗಡಿಯ ಮುಂಭಾಗದ ಜಗಲಿ ಕೆಳಭಾಗದಲ್ಲಿ ಬಿಸಾಡಿರುವ ಕಾರ್ಟ್ ನ್ ಬಾಕ್ಸ್ ನಲ್ಲಿ ಸ್ಫೋಟಕ್ಕೆ ಬಳಸುವ ಜಿಲಿಟಿನ್ ಕಡ್ಡಿಗಳು ಕೇಪು ಗಳು ಸಾವಿರ ರೂ ನಗದು ಹಣ, ತೆಲುಗುನಲ್ಲಿ ಕನ್ನಡದಲ್ಲಿ ಬರೆದಿರುವ ಚೀಟಿ ಗಳು ಆ ಚೀಟಿಗಳಲ್ಲಿ 37 ಜನರ ಹೆಸರುಗಳು ಬಾಂಬುಗಳ ಇಟ್ಟಿರುವ ಸ್ಥಳಗಳ ಬಗ್ಗೆ ವಿವರಗಳು ಬರೆದಿರುವುದು ಆತಂಕ ಹೆಚ್ಚಾಗಲು ಕಾರಣ ವಾಗಿತ್ತು.
ಸ್ಫೋಟಕಗಳು ಇರುವ ಬಗ್ಗೆ ಆತಂಕಗೊಂಡು ಸುರೇಶ್ ಗ್ರಾಮಾಂತರ ಠಾಣೆ ಪೊಲೀಸರಿಗೆ ಗಮನಕ್ಕೆ ತಂದಿದ್ದರು. ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ನಾಗೇಶ್ ಸಿಪಿಐ ಬೈರಪ್ಪ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಟನ್ ಬಾಕ್ಸ್ ನಲ್ಲಿದ್ದ ಸ್ಫೋಟಕದ ವಸ್ತುಗಳು ಮತ್ತು ಚೀಟಿಯನ್ನು ವಶಪಡಿಸಿಕೊಂಡು ಅಂಗಡಿಯ ಮಾಲಿಕ ಸುರೇಶ್ ರವರಿಂದ ದೂರು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್ ರೆಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಸ್ಪೋಟಕ ಕ ವಸ್ತುಗಳು ಸಿಕ್ಕಿದ್ದ ಸ್ಥಳವನ್ನು ವೀಕ್ಷಿಸಿದ ನಂತರ ಅಂಗಡಿಯ ಮಾಲೀಕರೊಂದಿಗೆ ಚರ್ಚೆ ನಡೆಸಿದರು ನಂತರ ಶ್ವಾನ ದಳವನ್ನು ಕರೆಸಿ ತಪಾಸಣೆ ಸಹ ನಡೆಸಿದರು.
ನಂತರ ಮಾತನಾಡಿದ ಎಸ್ಪಿ ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಸಿಕ್ಕಿರುವ ಚೀಟಿಗಳಲ್ಲಿ ಹೆಸರು ಇರುವುವರನನ್ನು ಕರೆಸಿ ವಿಚಾರಣೆ ಮಾಡುವುದರ ಜೊತೆಗೆ ಗ್ರಾಮದ ಜನತೆ ಆತಂಕಗೊಳ್ಳದಂತೆ ಗ್ರಾಮದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಕೈಗೊಂಡಿದ್ದಾರೆ.