ಜಮ್ಮು, ಜೂ.19-ಸ್ನಾನ ಮಾಡುತ್ತಿದ್ದ ಮೂವರು ಬಾಲಕಿಯರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಜಲಸಮಾಧಿಯಾಗಿರುವ ಘಟನೆ ಕಾಶ್ಮೀರದ ಜಮ್ಮು ನಗರದಲ್ಲಿ ನಿನ್ನೆ ಸಂಜೆ ಸಂಭವಿಸಿದೆ.
ಎಂಟರಿಂದ 14 ವರ್ಷಗಳ ವಯೋಮಾನದ ಆರು ಬಾಲಕಿಯರು ಜಮ್ಮುವಿನ ಜಾಜಾರ್ ಕೊಟ್ಲಿ ಪ್ರದೇಶದ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಆಗ ಹಠಾತ್ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹದಲ್ಲಿ ಅವರು ಕೊಚ್ಚಿ ಹೋದರು. ಮೂವರನ್ನು ಸ್ಥಳೀಯರು ರಕ್ಷಿಸಿದರು. ಆಧರೆ ನಿಮಿತಾ, ನಿಹಾರಿಕಾ ಮತ್ತು ಜ್ಯೋತಿ ಎಂಬ ಬಾಲಕಿಯರು ನೀರು ಪಾಲಾದರು ನಂತರ ಅವರ ಮೃತದೇಹ ಪತ್ತೆಯಾಯಿತು.