ಆಟವಾಡಲು ಹೋಗಿ ನಾಪತ್ತೆಯಾಗಿದ್ದ ಮಗು ಶವವಾಗಿ ಪತ್ತೆ

ಹಾವೇರಿ, ಜೂ.19-ಆಟವಾಡಲು ಹೋಗಿ ನಾಪತ್ತೆಯಾಗಿದ್ದ ಮಗು ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿರುವ ದುರ್ಘಟನೆ ಆಡೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕುಸೂನೂರ ಗ್ರಾಮದ ಅಬ್ಬಸಾಲಿ ಕಿರವಾಡಿ ಎಂಬುವರ ಮಗಳು ಮೀನಾದ್(5) ಮೃತಪಟ್ಟಿರುವ ಮಗು. ನಿನ್ನೆ ಮಧ್ಯಾಹ್ನ ಈ ಮಗು ಮನೆ ಸಮೀಪವೇ ಆಟವಾಡುತ್ತಾ ನಾಪತ್ತೆಯಾಗಿದೆ. ಕೆಲ ಸಮಯದ ಬಳಿ ಪೆÇೀಷಕರು ಗಮನಿಸಿ ಹುಡುಕಾಡಿದರಾದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮನೆ ಹಿಂದಿನ ಗುಂಡಿಯಲ್ಲಿ ಮಗು ಶವವಾಗಿ ಪತ್ತೆಯಾಗಿರುವುದನ್ನು ಕಂಡ ಪೆÇೀಷಕರು-ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಬಗ್ಗೆ ಆಡೂರು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ