ಮಾಸ್ಕೋ: ಜೂ-19; ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಜಿ ಗ್ರೂಪ್ನ ಆರಂಭಿಕ ಪಂದ್ಯದಲ್ಲಿ ಟುನಿಶಿಯಾ ವಿರುದ್ಧ ಇಂಗ್ಲೆಂಡ್ ಗೆಲುವು ದಾಖಲಿಸಿದೆ.
ರಷ್ಯಾದ ಮಾಸ್ಕೊದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಇಂಗ್ಲೆಂಡ್ ಟೀಂ ಟುನಿಶಿಯಾ ವಿರುದ್ದ 2-1 ಅಂತರದ ರೋಚಕ ಜಯ ದಾಖಲಿಸಿತು. ಇನ್ನು ಉತ್ತಮ ಆರಂಭ ಪಡೆದ ಇಂಗ್ಲೆಂಡ್ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. 11ನೇ ನಿಮಿಷದಲ್ಲಿ ಟೊಟ್ಟೆನ್ಹಾಮ್ ನೀಡಿದ ಸೆಂಟರ್ ಫಾರ್ವರ್ಡ್ನ್ನು ನಾಯಕ ಹ್ಯಾರಿ ಕೇನ್ ಗೋಲಾಗಿ ಪರಿವರ್ತಿಸುವ ಮೂಲಕ ಇಂಗ್ಲೆಂಡ್ ತಂಡದ ಮೇಲುಗೈಗೆ ಕಾರಣರಾದರು.
ಆದರೆ ಬಳಿಕ 35ನೇ ನಿಮಿಷದಲ್ಲಿ ತುನಿಶಿಯಾದ ಫೆರ್ಜಾನಿ ಸಾಸ್ಸಿ ಪೆಲಾಲ್ಟಿ ಮೂಲಕ ಗೋಲು ಬಾರಿಸಿ 1-1 ಗೋಲುಗಳ ಸಮಬಲ ಒದಗಿಸಿದರು. ನಂತರದ ಅವಧಿಯಲ್ಲಿ ಎರಡೂ ತಂಡಗಳು ಸಮಬಲದ ಆಟ ಪ್ರದರ್ಶಿಸಿದವು. 90ನೇ ನಿಮಿಷದವರೆಗೂ ಉಭಯ ತಂಡಗಳು ಮತ್ತೆ ಗೋಲು ಗಳಿಸದ ಕಾರಣ 1-1 ಸಮಬಲವಿತ್ತು. 90 ನಿಮಿಷಗಳ ಅವಧಿ ಮುಗಿದ ನಂತರ 4 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಈ ಅವಧಿಯ ಮೊದಲ ನಿಮಿಷ ಅಂದರೆ 90+1ರಲ್ಲಿ ಆಂಗ್ಲ ನಾಯಕ ಹ್ಯಾರಿ ಕೇನ್ ಕಾರ್ನರ್ ಮೂಲಕ ಇಂಗ್ಲೆಂಡ್ಗೆ ಗೆಲುವಿನ ಗೋಲು ಬಾರಿಸಿದರು.
ನಂತರ ಇನ್ನುಳಿದ ಮೂರು ನಿಮಿಷದಲ್ಲಿ ಟುನಿಶಿಯಾ ಗೋಲು ಗಳಿಸುವಲ್ಲಿ ವಿಫಲವಾಯಿತು. ಹೀಗಾಗಿ ಇಂಗ್ಲೆಂಡ್ ತಂಡ ಟುನಿಶಿಯಾ ವಿರುದ್ಧ 2-1 ಗೋಲುಗಳ ಅಂತರದ ರೋಚಕ ಜಯ ದಾಖಲಿಸಿದೆ.
FIFa World Cup 2018,England up and running with win,tunisia