
ತುಮಕೂರು,ಜೂ.18- ಅಪರಿಚಿತ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ನಂತರ ಗುರುತು ಸಿಗದಂತೆ ಸುಟ್ಟು ಹಾಕಲು ಯತ್ನಿಸಿರುವ ಘಟನೆ ಕೋರಾ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮಸಾಗರ ಗೇಟ್ ಬಳಿ ಸ್ಕೆವಾಕ್ ಸಮೀಪವಿರುವ ಭೂ ಶಕ್ತಿ ಕೇಂದ್ರದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್ ರಸ್ತೆಬದಿ ತಡರಾತ್ರಿ ಈ ದುರ್ಘಟನೆ ನಡೆದಿದೆ.
ಸುಮಾರು 42 ವರ್ಷದ ವ್ಯಕ್ತಿಯನ್ನು ದುಷ್ಕರ್ಮಿಗಳು ಈ ಜಾಗಕ್ಕೆ ಕರೆತಂದು ಗುಂಡು ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ನಂತರ ಗುರುತು ಸಿಗದಂತೆ ಸುಟ್ಟು ಹಾಕಲು ಯತ್ನಿಸಿದ್ದಾರೆ.
ಇಂದು ಬೆಳಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದ ದಾರಿಹೋಕರು ಅರ್ಧಂಬರ್ಧ ಸುಟ್ಟು ಕರಕಲಾಗಿದ್ದ ಶವವನ್ನು ಕಂಡು ಕೋರಾ ಪೆÇಲೀಸರಿಗೆ ತಿಳಿಸಿದ್ದಾರೆ.
ಸಬ್ಇನ್ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮಧ್ಯರಾತ್ರಿ 1.30ರಿಂದ 2 ಗಂಟೆ ಸಮಯದಲ್ಲಿ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ವ್ಯಕ್ತಿ ಮೂಲತಃ ಉತ್ತರಭಾರತದವರೆಂದು ಹೇಳಲಾಗುತ್ತಿದೆ.
ಸೋಮಸಾಗರ ಗೇಟ್ ಬಳಿ ಈ ಘಟನೆ ನಡೆದಿರುವುದರಿಂದ ವಸಂತ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ನೌಕರನಾಗಿರಬಹುದೇ ಅಥವಾ ಎಲ್ಲಿಂದಲಾದರೂ ಈತನನ್ನು ಕರೆತಂದದು ಈ ಜಾಗದಲ್ಲಿ ಕೊಲೆ ಮಾಡಿರಬಹುದೇ ಎಂಬ ಮಾಹಿತಿಯನ್ನಾಧರಿಸಿ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
ಕೊಲೆಯಾಗಿರುವ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕೂಡಲೇ ತನಿಖಾýಕಾರಿಗಳಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ನಾಗರಾಜ್, ವೃತ್ತ ನಿರೀಕ್ಷಕ ಮಧುಸೂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಂಡ ರಚನೆ:
ಕೊಲೆಯಾದ ವ್ಯಕ್ತಿಯ ಚಹರೆ ಹಾಗೂ ವಿಳಾಸ ಪತ್ತೆಹಚ್ಚಲು ಮತ್ತು ಆರೋಪಿಗಳ ಶೋಧಕ್ಕಾಗಿ ವಿಶೇಷ ಪೆÇಲೀಸ್ ತಂಡವನ್ನು ರಚಿಸಲಾಗಿದೆ. ಆಸ್ತಿ ವಿವಾದವೋ, ಹಣಕಾಸು ಜಗಳವೋ ಅಥವಾ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೇ ಎಂಬಿತ್ಯಾದಿ ಶಂಕೆ ವ್ಯಕ್ತಪಡಿಸಿ ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ.