ಕನಕಪುರ, ಜೂ.18- ಕೌಟುಂಬಿಕ ಕಲಹ ಮತ್ತು ಸಾಲ ಬಾಧೆಯಿಂದ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಚಾಕನಹಳ್ಳಿ ಬಳಿಯ ಸುಂಟರದೊಡ್ಡಿ ಗ್ರಾಮದ ಶಿವರಾಜು (43) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಮೃತನಿಗೆ ಇಬ್ಬರು ಹೆಂಡತಿಯರಿದ್ದು, ಮೊದಲ ಹೆಂಡತಿ ಈತನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾಳೆ ಎನ್ನಲಾಗಿದ್ದು, ಎರಡನೇ ಹೆಂಡತಿಯೊಂದಿಗೆ ಆಗಾಗ್ಗೆ ಜಗಳ, ಮೈಮನಸ್ಸು ನಡೆಯುತ್ತಿದ್ದು, ಜೊತೆಗೆ ಕಾರು ಚಾಲಕನಾಗಿದ್ದ ಶಿವರಾಜ್ ಕಾರಿನ ಸಾಲವನ್ನು ಸಹ ತಿರುಗಿಸಿರಲಿಲ್ಲ ಎಂದು ತಿಳಿದು ಬಂದಿದೆ. ಒಂದೆಡೆ ಸಂಸಾರದ ಜಂಜಾಟ ಮತ್ತೊಂದೆಡೆ ಸಾಲ ಬಾಧೆಯಿಂದ ಮನ ನೊಂದಿದ್ದ ಶಿವರಾಜ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದ್ದಾರೆ.