ಜೋಗ ಜಲಪಾತ ಬಳಿ ವಿವಾದಿತ ಆಣೆಕಟ್ಟು ಯೋಜನೆ
ವೃಕ್ಷಲಕ್ಷ ಪರಿಸರ ತತಜ್ಞರ ತಂಡದ ಭೇಟಿ – ಸ್ಥಾನಿಕ ಜನರ ಜೊತೆ ಸಂವಾದ.
ಶಿರಸಿ :
ಇತ್ತೀಚೆಗೆ ಜೋಗ ಜಲಪಾತದ ಬಳಿಯ ಜೋಗಿಮಠ ಎಂಬ (ಸೀತಾ ಕಟ್ಟೆ ಸೇತುವೆ ಬಳಿ) ಪ್ರದೇಶಕ್ಕೆ ವೃಕ್ಷಲಕ್ಷ ತಜ್ಞರ ತಂಡ ಭೇಟಿ ನೀಡಿತು. ವರ್ಷವಿಡೀ ಜೋಗ ಜಲಪಾತ ನೋಡಲು ಅನುಕೂಲವಾಗುವ ಆಣೆಕಟ್ಟು ನಿರ್ಮಿಸುವ ಖಾಸಗಿ ಕಂಪನಿಯ ಯೋಜನೆಯ ಪರಿಸರ ದುಷ್ಪರಿಣಾಮಗಳ ಬಗ್ಗೆ ಸ್ಥಳ ಸಮೀಕ್ಷೆ ನಡೆಸಿತು. ಈ ಪ್ರದೇಶದ ರೈತರು, ಹೋರಾಟ ಸಮೀತಿಯವರ ಅಹ್ವಾನದ ಮೇಲೆ ವೃಕ್ಷಲಕ್ಷ ಈ ಸ್ಥಳ ಭೇಟಿ ಕಾರ್ಯಕ್ರಮ ಆಯೋಜಿಸಿತ್ತು.
ಜನತೆಗೆ ಸರಿಯಾದ ಮಾಹಿತಿ ನೀಡಿಲ್ಲ, ಪ್ರವಾಸ್ಯೋದ್ಯಮ ಇಲಾಖೆ ಯೋಜನೆ ರೂಪಿಸುವಾಗ ಸ್ಥಳೀಯ ಗ್ರಾಮ ಪಂಚಾಯತ ಸಂಬಂಧಿತ ಹಳ್ಳಿಗಳ ಜನರ ಜೊತೆ ಮಾತುಕತೆ ನಡೆಸಿಲ್ಲ, ಮಾಹಿತಿ ನೀಡಿಲ್ಲ ಶರಾವತಿ ಲಿಂಗನಮಕ್ಕಿ ಯೋಜನೆಗಳಿಂದ ನಿರಾಶ್ರಿತರಾದ ರೈತರು ಇಲ್ಲಿದ್ದಾರೆ. ಪಕ್ಕದಲ್ಲಿ ಶರಾವತಿ ಅಭಯಾರಣ್ಯವಿದೆ. ನದಿಯ ಎರಡೂ ದಂಡೆಗಳಲ್ಲಿ ಅರಣ್ಯ ಭೂಮಿ ಇದೆ. ಅರಣ್ಯ-ಪರಿಸರ ಪರವಾನಿಗೆ ಇಲ್ಲದೇ ಯೋಜನೆ ಜಾರಿ ಮಾಡಿದರೆ ಅದು ಅಕ್ರಮ ಯೋಜನೆ ಆಗುತ್ತದೆ. ನದಿಯ ಎರಡೂ ದಂಡೆಗೆ ಗೋಡೆ ಕಟ್ಟುವ ಪ್ರಸ್ತಾವನೆ ಮೂರ್ಖತನದ್ದು ಎಂದು ವೃಕ್ಷಲಕ್ಷ ತಜ್ಞರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಪರಿಸರ ತಜ್ಞರಾದ ಶ್ರೀ ಅನಂತ ಹೆಗಡೆ ಅಶೀಸರ ಡಾ|| ಟಿ. ವಿ. ರಾಮಚಂದ್ರ, ಡಾ|| ಕೇಶವ ಕೊಸರ್ೆ, ಡಾ|| ಸುಭಾಸ್ ಚಂದ್ರನ್ ನೇತೃತ್ವದ ತಂಡ ಖಾಸಗಿಯವರಿಗೆ ಜೋಗ ಜಲಪಾತದಂತಹ ಸೂಕ್ಮ ಪರಿಸರ ಪ್ರದೇಶದಲ್ಲಿ ಅವಕಾಶ ನೀಡುವದು ಎಷ್ಟು ಸರಿ’ ಎಂದು ಪ್ರಶ್ನಿಸಿದರು. ಇಡುವಾಣಿ, ಕಾನುತೋಟ, ಜೋಗಿಮಠ, ಮುಂತಾದ ಹಳ್ಳಿಗಳ ಹೋರಾಟ ಸಮೀತಿ ಕಾರ್ಯಕರ್ತರು ತಮ್ಮ ಹೋರಾಟದ ಮಾಹಿತಿ ನೀಡಿದರು.
ಜೋಗ ಅಭಿವೃದ್ಧಿ ಪ್ರಾಧಿಕಾರ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಲ್ಲಿ ಜೋಗ ಜಲಪಾತ ನೈಸಗರ್ಿಕ ಪರಿಸ್ಥಿತಿಗೆ ಅಡ್ಡಿಪಡಿಸುವ ಕಾರ್ಯಕ್ಕೆ ಮುಂದಾಗಬಾರದು. ಜಲಪಾತದ ಮೇಲ್ಭಾಗದಲ್ಲಿ ಆಣೆಕಟ್ಟು, ಗೋಡೆ ನಿರ್ಮಾಣ. ಪೈಪ್ ಲೈನ್ ನಿರ್ಮಾಣ, ವಿದ್ಯುತ್ ತಂತಿ ಮಾರ್ಗ, ಇತ್ಯಾದಿ ಕಾಮಗಾರಿ, ಅರಣ್ಯ ನಾಶ. ತೀವೃ ಮಾನವ ಹಸ್ತಕ್ಷೇಪಕ್ಕೆ ಸಕರ್ಾರ ಮುಂದಾಗಬಾರದು. ಬದಲಾಗಿ ಜೋಗ ಜಲಪಾತಕ್ಕೆ ನದಿಗೆ ಇನ್ನೂ ಹೆಚ್ಚು ನೀರು ಹರಿದು ಬರಲು ಶರಾವತಿ ಕಣಿವೆ ರಕ್ಷಣೆಗೆ, ಜಲಾಯನ ಅಭಿವೃದ್ಧಿಗೆ ಸಕರ್ಾರ, ಜೋಗ ಪ್ರಾಧಿಕಾರ ಮುಂದಾಗಬೇಕು ಎಂದು ಪರಿಸರ ತಜ್ಞರು ಅಭಿಪ್ರಾಯ ನೀಡಿದ್ದಾರೆ. ಶರಾವತಿ ಸಮೀಪ ಅಭಯಾರಣ್ಯದ ಸಮೀಪ ಹೇಗೆ ಆಣೆಕಟ್ಟು ನಿರ್ಮಾಣ ಸಾಧ್ಯ ಎಂದು ತಂಡ ಪ್ರಶ್ನಿಸಿದೆ