ಸೂಪರ್ ಸಿಎಂ ಎಂದು ಪುಕ್ಕಟೆ ಪ್ರಚಾರ ನೀಡಲಾಗುತ್ತಿದೆ: ಹೆಚ್.ಡಿ. ರೇವಣ್ಣ

ಹುಬ್ಬಳ್ಳಿ: ಸೂಪರ್ ಸಿಎಂ ಎಂದು ನನಗೆ ಪುಕ್ಕಟೆ ಪ್ರಚಾರ ಸಿಗುತ್ತಿದೆ. ಆದರೆ ನಾನು ಲೋಕೋಪಯೋಗಿ ಇಲಾಖೆ ಕೆಲಸ ಮಾತ್ರ ಮಾಡುತ್ತಿರೋದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಯಾರೂ ಧೃತಿಗೆಡಬೇಕಿಲ್ಲ, ಐದು ವರ್ಷ ನಾವೇ  ಇರ್ತೀವಿ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. ಆರ್‌ಡಿಪಿಆರ್ ಇಲಾಖೆಗೆ ಅಧಿಕಾರಿಗಳನ್ನು ನಾನು ಕೊಟ್ಟಿದೀನಿ. ಪೋಸ್ಟಿಂಗ್ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು, ಅಲ್ಲದೆ ನೀರಾವರಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.
ಹಸ್ತಕ್ಷೇಪ ಮಾಡಿದ್ದೇನೆಂದು ಕಾಂಗ್ರೆಸ್ ಅಧ್ಯಕ್ಷರು ಕೇಳಿದರೆ ಉತ್ತರ ಕೊಡುತ್ತೇನೆ ಎಂದ ಅವರು ಡಿ.ಕೆ. ಶಿವಕುಮಾರ್‌‌ ಮತ್ತು ನಾನು ಚೆನ್ನಾಗಿದ್ದೀವಿ. ಸುಮ್ಮನೆ ನಮ್ಮ ನಡುವೆ ಜಗಳ ತಂದಿಡುವ ಕೆಲಸ ನಡೆಯುತ್ತಿದೆ ಎಂದರು.

ಉನ್ನತ ಶಿಕ್ಷಣಕ್ಕೆ ಬಸವರಾಜ್ ಹೊರಟ್ಟಿಯವರ ಕೊಡುಗೆ ದೊಡ್ಡದಿದೆ. ಹೊರಟ್ಟಿಯವರು ನಮ್ಮ ನಾಯಕರು, ಯಾವ ಖಾತೆ ಕೊಟ್ಟರೂ ಅವರಿಗೆ ನಿರ್ವಹಿಸುವ ಸಾಮರ್ಥ್ಯವಿದೆ. ಹೊರಟ್ಟಿಯವರಿಗೆ ಸಚಿವ ಸ್ಥಾನ ಕೊಡುವಂತೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಕೇಳುತ್ತೇನೆ ಎಂದಿದ್ದಾರೆ.
ರಂಗಪ್ಪರನ್ನು ಸಲಹೆಗಾರರಾಗಿ ನೇಮಕ ಮಾಡುವ ವಿಚಾರ ಸಿಎಂಗೆ ಬಿಟ್ಟದ್ದು ಹಾಗೂ ರೋಹಿಣಿ ಸಿಂಧೂರಿಯನ್ನು ಹಾಸನ ಜಿಲ್ಲಾಧಿಕಾರಿ ಮಾಡುವ ವಿಚಾರ ಸಿಎಂ ನೋಡಿಕೊಳ್ಳುತ್ತಾರೆ  ಎಂದರು.
ಇಂದು ಅಧಿಕಾರಿಗಳ‌ ಸಭೆ ನಡೆಸಿದ್ದೇನೆ. ಬಿಆರ್‌ಟಿಎಸ್ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ರೆ ಸಸ್ಪೆಂಡ್ ಮಾಡುತ್ತೇನೆ. ಅಧಿಕಾರಿಗಳಿಗೆ ಗಡುವು ನೀಡಿದ್ದೇನೆ. ಅಲ್ಲದೆ ನಮ್ಮ ಅವಧಿಯಲ್ಲೇ ಕಾಮಗಾರಿ ಪೂರ್ಣ ಗೊಳಿಸುತ್ತೇವೆ ಎಂಬ ಭರವಸೆ ನೀಡಿದರು.

 

ಈ ವಿಡಿಯೋಗಳು ನಾವು ತಯಾರಿಸಿದ್ದಲ್ಲ. ವಾಟ್ಸಪ್ಪ್ ನಲ್ಲಿ ವೈರಲ್ ಆಗಿರೋ ವಿಡಿಯೋಗಳು. ನಾವು ಅವುಗಳನ್ನು ಪರಿಶೀಲಿಸಿ ನಿಮ್ಮೊಂದಿಗೆ ಕೇವಲ ಮನೋರಂಜನೆಗಾಗಿ ತೋರಿಸುತ್ತಿದ್ದೇವೆ. ನಾವು ಈ ವಿಡಿಯೋಗಳ ಮಾಲೀಕತ್ವದ ಹಕ್ಕು ಪಡೆಯುವುದಿಲ್ಲ. ಯಾರನ್ನು ನೋವುಂಟು ಮಾಡುವ ಅಥವಾ ತೇಜೋವಧೆ ಮಾಡುವ ಉದ್ದೇಶವು ನಮಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ