ಬೀಡಿಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

 

ಬೆಂಗಳೂರು, ಜೂ.17- ಪ್ರತಿಷ್ಠಿತ ಕಂಪೆನಿಗಳ ಬೀಡಿಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೀಣ್ಯ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಮೈಲಿಗಾನಹಳ್ಳಿ ಮೂಲದ ಬೈರೋಜಿರಾವ್(31) ಬಂಧಿತ ಆರೋಪಿ.
ಭೆರೋಜಿರಾವ್ ಯಲಹಂಕದ ಮಾರುತಿ ನಗರದಲ್ಲಿ ನೆಲಸಿ, ಮಂಗಳೂರಿನ ಪ್ರೀತಿ ಮತ್ತು ಎಸ್.ಕೆ. ಬೀಡಿಗಳನ್ನು ನಕಲು ಮಾಡಿ ಮೂಲಕ ಕಂಪೆನಿಯ ಲೇಬಲ್‍ಗಳನ್ನು ನಕಲಿ ಬೀಡಿ ಬಂಡಲ್‍ಗಳಿಗೆ ಹಚ್ಚಿ ಮಾರಾಟ ಮಾಡುತ್ತಿದ್ದ.
ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೀಣ್ಯ ಪೆÇಲೀಸರು 3 ಲಕ್ಷ ಬೆಲೆ ಬಾಳುವ 36 ಬಂಡಲ್ ಮಂಗಳೂರು ಪ್ರೀತಿ ಬೀಡಿ, 21 ಬಂಡಲ್ ಎಸ್.ಕೆ. ಬೀಡಿಗಳು, ಬೀಡಿ ತಯಾರು ಮಾಡಲು ಬೇಕಾದ ಪ್ಲಾಸ್ಟಿಕ್ ಕವರ್ಸ್, ಅಚ್ಚುಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಪೆÇಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ