ಅಡ್ಡರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಆಟೋಗಳ ಗಾಜುಗಳನ್ನು ಒಡೆದು ಪರಾರಿ

 

ಬೆಂಗಳೂರು, ಜೂ.17-ದ್ವಿಚಕ್ರ ವಾಹನದಲ್ಲಿ ಬಂದ ಪುಂಡರ ಗುಂಪೆÇಂದು ಕಳೆದ ರಾತ್ರಿ ಕುರುಬರಹಳ್ಳಿಯ 22ನೇ ಅಡ್ಡರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಆಟೋಗಳ ಗಾಜುಗಳನ್ನು ಒಡೆದು ಪರಾರಿಯಾಗಿದ್ದಾರೆ.

20ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು, ಪುಂಡರ ಹಾವಳಿಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ರಾತ್ರಿ ಸುಮಾರು 12 ಸಮಯದಲ್ಲಿ ದ್ವಿಚಕ್ರ ವಾಹನಗಳಲ್ಲಿ ಬಂದಂತಹ ನಾಲ್ವರು ದುಷ್ಕರ್ಮಿಗಳು ರಸ್ತೆ ಬದಿ ನಿಲ್ಲಿಸಿದ್ದ ಆಟೋ, ಕಾರುಗಳ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ ಮನಬಂದಂತೆ ಒಡೆದು ಜಖಂಗೊಳಿಸಿದ್ದಾರೆ.

ಈ ಗದ್ದಲದಿಂದ ಹೊರ ಬಂದ ಕೆಲ ಸ್ಥಳೀಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮೀ ಲೇಔಟ್ ಠಾಣೆ ಪೆÇಲೀಸರು ನಾಕಾಬಂಧಿ ಮಾಡಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇನ್ನು ಆರ್‍ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದ್ದು, ಇದೇ ತಂಡ ಈ ಕೃತ್ಯ ನಡೆಸಿರಬಹುದೆಂದು ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ತಣ್ಣಗಾಗಿದ್ದ ಈ ಪುಂಡರ ಹಾವಳಿ, ಮತ್ತೆ ರಾಜಧಾನಿಯಲ್ಲಿ ಮರುಕಳಿಸಿದೆ. ಕಳೆದೆರಡು ದಿನಗಳ ಹಿಂದಷ್ಟೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ 300ಕ್ಕೂ ಹೆಚ್ಚು ಇನ್ಸ್‍ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹೊಸ ಇನ್ಸ್‍ಪೆಕ್ಟರ್‍ಗಳು ಅಧಿಕಾರ ವಹಿಸಿಕೊಂಡ ಕೆಲವೇ ತಾಸಿನಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ