ರಾಜ್ಯ ಪ್ರವಾಸೋದ್ಯಮ ವತಿಯಿಂದ ಪ್ರವಾಸಿಗರಿಗೆ ವಿಶೇಷ ಪ್ರವಾಸ

 

ಬೆಂಗಳೂರು, ಜೂ.16- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಮಳೆಗಾಲದ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ಸಿಗಂದೂರು-ಜೋಗ -ಶಿವನಸಮುದ್ರ ಹಾಗೂ ತಲಕಾಡಿಗೆ ವಿಶೇಷ ಪ್ರವಾಸವನ್ನು ಆಯೋಜಿಸಿದೆ.
ಸಿಗಂದೂರು-ಜೋಗ ಜಲಪಾತ ಪ್ರವಾಸ ಎರಡು ದಿನವಾಗಿದ್ದು , ನಿಗಮದ ಬಸ್‍ನಲ್ಲಿ ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಮುಂಜಾನೆ ಸಾಗರಕ್ಕೆ ತಲುಪಿ ನಂತರ ಸಿಗಂದೂರಿಗೆ ಕರೆದೊಯ್ದು ಶ್ರೀ ಚೌಡೇಶ್ವರಿ ದೇವಿಯ ದರ್ಶನ ವ್ಯವಸ್ಥೆ ಮಾಡಲಾಗಿದೆ.

ನಂತರ ವಿಶ್ವ ವಿಖ್ಯಾತ ಜೋಗ ಜಲಪಾತದ ವೀಕ್ಷಣೆಯಲ್ಲದೆ ಶರಾವತಿ ಸಾಹಸ ಶಿಬಿರಕ್ಕೂ ಭೇಟಿ ನೀಡಿ ಅಲ್ಲಿ ವಿವಿಧ ಚಟುವಟಿಕೆಗಳಲ್ಲಿ ಪ್ರವಾಸಿಗರು ಪಾಲ್ಗೊಳ್ಳಬಹುದಾಗಿದೆ.ಇದಕ್ಕೆ ಪ್ರವಾಸ ದರ 2150 ರೂ. ವೆಚ್ಚವಿರುತ್ತದೆ.
ಪ್ರತಿ ಶುಕ್ರವಾರ ಮತ್ತು ಶನಿವಾರ ಈ ಪ್ರವಾಸವಿರುತ್ತದೆ. ಇದಲ್ಲದೆ ಶಿವನಸಮುದ್ರ ಮತ್ತು ತಲಕಾಡಿಗೆ ಯಶವಂತಪುರ ಟಿಟಿಎಂಸಿಯಿಂದ ಬಸ್‍ನಲ್ಲಿ ಬೆಳಗ್ಗೆ 7 ಗಂಟೆಗೆ ಹೊರಟು 11 ಗಂಟೆಗೆ ಶಿವನಸಮುದ್ರ , ಗಗನಚುಕ್ಕಿ , ಭರಚುಕ್ಕಿ ಜಲಪಾತ ವೀಕ್ಷಣೆ ಮಧ್ಯರಂಗ ದರ್ಶನ ನಂತರ ತಲಕಾಡು ಮತ್ತು ವೈದ್ಯನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅದೇ ದಿನ ರಾತ್ರಿ 9 ಗಂಟೆಗೆ ಬೆಂಗಳೂರು ತಲುಪಲಿದೆ. ಇದಕ್ಕೆ 800 ರೂ.ಗಳನ್ನು ನಿಗದಿಪಡಿಸಲಾಗಿದೆ.
ಇದಕ್ಕೆ ಪ್ರತಿ ಶನಿವಾರ ಮತ್ತು ಭಾನುವಾರ ಆಯೋಜಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಡಿಡಿಡಿ.hoಠಿb್ಚ.್ಚಟ, ಮೊಬೈಲ್ 8970650070 ಸಂಪರ್ಕಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ