ಮುಂಬಾಗಿಲು ತೆಗೆದು ಮಹಿಳೆ ಒಳಗೆ ಕೆಲಸದಲ್ಲಿ ನಿರತರಾಗಿದ್ದಾಗ ಕಳ್ಳರು ಒಳನುಗ್ಗಿ ಬೀರುವಿನಲ್ಲಿದ್ದ 1.50 ಲಕ್ಷ ರೂ. ಬೆಲೆಯ ಚಿನ್ನಾಭರಣವನ್ನು ಕಳ್ಳತನ ಮಾಡಿ ಪರಾರಿ

 

ಬೆಂಗಳೂರು, ಜೂ.16- ಮುಂಬಾಗಿಲು ತೆಗೆದು ಮಹಿಳೆ ಒಳಗೆ ಕೆಲಸದಲ್ಲಿ ನಿರತರಾಗಿದ್ದಾಗ ಕಳ್ಳರು ಒಳನುಗ್ಗಿ ಬೀರುವಿನಲ್ಲಿದ್ದ 1.50 ಲಕ್ಷ ರೂ. ಬೆಲೆಯ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಘಟನೆ ವೈಯಾಲಿ ಕಾವಲ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಿ.ಜಿ.ಹಳ್ಳಿ 5ನೇ ಮುಖ್ಯರಸ್ತೆಯ ಕಟ್ಟಡದ ಎರಡನೇ ಮಹಡಿಯಲ್ಲಿ ತಾರಾ ಎಂಬುವರು ವಾಸವಾಗಿದ್ದಾರೆ. ನಿನ್ನೆ ಬೆಳಗ್ಗೆ 4 ಗಂಟೆ ಸಮಯದಲ್ಲಿ ತಾರಾ ಮುಂಬಾಗಿಲು ತೆರೆದು ಒಳಗೆ ಕೆಲಸದಲ್ಲಿ ನಿರತರಾಗಿದ್ದಾರೆ.
ಈ ವೇಳೆ ಕಳ್ಳರು ಒಳನುಗ್ಗಿ ರೂಂಗೆ ಹೋಗಿ ಬೀರು ತೆಗೆದು 1.50 ಲಕ್ಷ ರೂ. ಬೆಲೆಯ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಕೆಲ ಸಮಯದ ಬಳಿಕ ತಾರಾ ಬೀರು ಬಾಗಿಲು ತೆಗೆದುಕೊಂಡಿರುವುದನ್ನು ಗಮನಿಸಿ ನೋಡಿದಾಗ ಅದರಲ್ಲಿಟ್ಟಿದ್ದ ಆಭರಣಗಳು ನಾಪತ್ತೆಯಾಗಿದ್ದವು.
ಈ ಕಳ್ಳತನ ಬೆಳಗ್ಗೆ 4ಗಂಟೆಯಿಂದ 6 ಗಂಟೆ ಮಧ್ಯೆ ನಡೆದಿದೆ. ಈ ಬಗ್ಗೆ ವೈಯಾಲಿ ಕಾವಲ್ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ