ಲಂಡನ್:ಜೂ-16:ಕಾನೂನು ಹೋರಾಟಕ್ಕೆ ವೆಚ್ಚ ಮಾಡಿರುವ ಭಾರತದ 13 ಬ್ಯಾಂಕ್ಗಳಿಗೆ 1.815 ಕೋಟಿ ರೂ ಪಾವತಿಸುವಂತೆ ಉದ್ಯಮಿ ವಿಜಯ ಮಲ್ಯ ಅವರಿಗೆ ಬ್ರಿಟನ್ ಹೈಕೋರ್ಟ್ ಸೂಚಿಸಿದೆ.
ಭಾರತದ 13 ಬ್ಯಾಂಕ್ ಗಳ ಒಕ್ಕೂಟಕ್ಕೆ ಕಾನೂನು ಹೋರಾಟ ವೆಚ್ಚದ ಭಾಗವಾಗಿ 2 ಲಕ್ಷ ಪೌಂಡ್ ಹಣ ಪಾವತಿಸುವಂತೆ ಬ್ರಿಟನ್ ಹೈಕೋರ್ಟ್ ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯ ಅವರಿಗೆ ಆದೇಶಿಸಿದೆ. ವಿಜಯ ಮಲ್ಯ ಮತ್ತು ಬ್ಯಾಂಕ್ಗಳು ವೆಚ್ಚದ ಬಗ್ಗೆ ಒಪ್ಪಂದಕ್ಕೆ ಬಾರದಿದ್ದರೆ ನ್ಯಾಯಾಲಯವೇ ಪರಿಶೀಲನೆ ನಡೆಸಲಿದೆ ಎಂದು ವಕೀಲರು ತಿಳಿಸಿದ್ದಾರೆ.
ಅಲ್ಲದೇ ಬ್ರಿಟನ್ ನಲ್ಲಿ ನಡೆದ ಕರ್ನಾಟಕದ ಸಾಲ ವಸೂಲಾತಿ ಪ್ರಾಧಿಕಾರದ ಪ್ರಕರಣದ ವಿಚಾರಣೆಯ ಖರ್ಚು ವೆಚ್ಚಗಳನ್ನು ಭರಿಸುವಂತೆಯೂ ಮಲ್ಯಗೆ ಕೋರ್ಟ್ ಸೂಚಿಸಿದೆ. ಬ್ಯಾಂಕ್ ಗಳು ನಡೆಸಿರುವ ಕಾನೂನು ಹೋರಾಟಕ್ಕೆ ಖರ್ಚು ಮಾಡಿರುವ ವೆಚ್ಚವನ್ನು ಮಲ್ಯ ಭರಿಸಬೇಕಿದ್ದು, ಕನಿಷ್ಠ 1ಕೋಟಿ 80 ಲಕ್ಷ ರೂ. ಮೊತ್ತವನ್ನು ಕಟ್ಟಲೇಬೇಕು ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ಜಡ್ಜ್ ಆ್ಯಂಡ್ರೋ ಖಡಕ್ ಆದೇಶ ನೀಡಿದ್ದಾರೆ.
ಭಾರತೀಯ ಬ್ಯಾಂಕ್ ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕಾರ್ಪೋರೇಷನ್ ಬ್ಯಾಂಕ್, ಫೆಡೆರಲ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್ ಸೀಸ್ಬ್ಯಾಂಕ್, ಯುನೆಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜೆಎಮ್ ಫೈನಾಷಿಯಲ್ ಆಸೆಟ್ ರಿಕನ್ ಸ್ಟ್ರಕ್ಷನ್ ಕೊ.ಪ್ರೈ ಲಿಮಿಟೆಡ್ ಈ ಬ್ಯಾಂಕ್ ಗಳು ಸಾಲವನ್ನೂ ವಸೂಲಿ ಮಾಡಬಹುದೆಂದು ಕರ್ನಾಟಕ ಹೈ ಕೋರ್ಟ್ ಆದೇಶಿಸಿತ್ತು.
ಈ ನಡುವೆ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಜಯ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆ ನಡೆಸುತ್ತಿದೆ. ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ ಕೋರಿಕೊಂಡಿದ್ದು, ದೇಶದ ಪರವಾಗಿ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ವಾದ ಮಂಡನೆ ಮಾಡುತ್ತಿದೆ. ಈ ಪ್ರಕರಣ ವಿಚಾರಣೆ ಜುಲೈ 11ಕ್ಕೆ ಮುಂದೂಡಲ್ಪಟ್ಟಿದ್ದು, ಜೂನ್ 31ಕ್ಕೆ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ ಮಲ್ಯ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮತ್ತೆ ಮನವಿ ಸಲ್ಲಿಸಲು ಪರವಾನಗಿ ಪಡೆಯಲು ಮಲ್ಯ ಅವರು ಮೇಲ್ಮನವಿ ನ್ಯಾಯಾಲಯಕ್ಕೆ ಮೊರೆ ಹೋಗಬೇಕಾಗುತ್ತದೆ’ ಎಂದು ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
UK court orders, Vijay Mallya, to pay costs to Indian banks