ದೊಡ್ಡಬಳ್ಳಾಪುರ: ಐದು ವರ್ಷಗಳ ಕಾಲ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರಲಿದ್ದು. ಸಮಿಶ್ರ ಸರ್ಕಾರದಲ್ಲಿ ತೂಬಗೆರೆ ಹೋಬಳಿಗೆ ಹೆಚ್ಚಿನ ಅನುದಾನ ತಂದು ಸಮಗ್ರ ಅಭಿವೃದ್ಧಿಗೆ ಅದ್ಯತೆ ನೀಡಲಾಗುವುದು ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿಯ ಗಂಗಸಂದ್ರ. ಪೆರಮಗೊಂಡನಹಳ್ಳಿ. ಲಕ್ಷ್ಮಿದೇವಿಪುರ ತಿರುಮಗೊಂಡಹಳ್ಳಿ ನಾಗೇನಹಳ್ಳಿ ಇನ್ನು ಮುಂತಾದ ಗ್ರಾಮಗಳಿಗೆ ಬೇಟಿ ನೀಡಿ ಹೆಚ್ಚು ಮತಗಳನ್ನು ಕೊಟ್ಟ ಗೆಲ್ಲಿಸಿಕೊಟ್ಟ ಮತದಾರರಿಗೆ ನಿಸರ್ಗ ನಾರಾಯಣಸ್ವಾಮಿ ಕೃತಜ್ಞತೆ ಸಲ್ಲಿಸಿದರು.ಹಾಗೂ ಹಾಡೋನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಪಶುವೈಧ್ಯಕೀಯ ಆಸ್ವತ್ರೆಯನ್ನು ಉದ್ಘಾಟನೆ ಮಾಡಿ ಮಾತನಾಡಿ ರಾಜ್ಯದಲ್ಲಿ ಸಮಿತ್ರ ಸರ್ಕಾರವಿದೆ.ಯಾವುದೇ ಗೊಂದಲ ಬೇಡ ಕುಮಾರಸ್ವಾಮಿ ಕೊಟ್ಟಿರುವ ಮಾತು ತಪ್ಪುವುದಿಲ್ಲ. ಕಾರ್ಯಕರ್ತರು ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾದಿಸಿದ ಮಾತ್ರಕ್ಕೆ ಸುಮ್ಮಾನಾಗಬಾರದು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು.ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಸಮಯಕ್ಕೆ ಕರೆ ಮಾಡಿದರೂ ಸ್ವೀಕರಿಸುತ್ತೇನೆ. ಯಾವ ಇಲಾಖೆಯಿಂದ ಗ್ರಾಮಕ್ಕೆ ಕೆಲಸಗಳು ಆಗಬೇಕು ಎನ್ನುವುದನ್ನು ಪಟ್ಟಿಮಾಡಿಕೊಂಡು ತಕ್ಷಣ ಸಂಬಂಧಿಸಿದ ಇಲಾಖೆಗಳಿಗೆ ಆದೇಶ ಮಾಡುತ್ತೇನೆ. ಎಲ್ಲಾ ಮುಖಂಡರುಗಳು ಮಾರ್ಗದರ್ಶನ ನೀಡಿದರೆ ಹೋಬಳಿ ಮತ್ತಷ್ಟು ಅಭಿವೃದ್ಧಿ ಹಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದ್ಯಸ ಎಚ್.ಅಪ್ಪಯ್ಯಣ್ಣ ಮಾತನಾಡಿ ತೂಬಗೆರೆ ಹೋಬಳಿಗೆ ಹೆಚ್ಚು ಆಧ್ಯತೆ ನೀಡಬೇಕು. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರು.ಚರಂಡಿ.ರಸ್ತೆಗಳ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅಧ್ಯತೆ ಕೊಡಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನರಸಿಂಹಯ್ಯ. ದೇವನಹಳ್ಳಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶ್ರೀನಿವಾಸ. ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾರಾಯಣಪ್ಪ.ಉಪಾಧ್ಯಕ್ಷೆ ಶಾಮಲಶ್ರೀನಿವಾಸ. ಯುವ ಜೆಡಿಎಸ್ ಅಧ್ಯಕ್ಷ ಮುರಳಿ. ಹೋಬಳಿ ಜೆಡಿಎಸ್ ಅಧ್ಯಕ್ಷ ದೇವರಾಜು. ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮುದುಕೃಷ್ಣಪ್ಪ. ಗುತ್ತಿಗೆದಾರ ಪುರೋಷೋತಮ್. ತೂಬಗೆರೆ ಪಶುವೈಧ್ಯದಿಕಾರಿ ಡಾ:ರಂಗಪ್ಪ. ಶ್ರೀನಿವಾಸ.ಲಕ್ಷ್ಮಿದೇವಿಪುರ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವರಾಜ್. ಮಾಜಿ ಉಪತಶೀಲ್ದಾರ್ ವೆಂಕರಮಣಪ್ಪ.ಯುವ ಮುಖಂಡ ಕೃಷ್ಣಮೂರ್ತಿ. ಗ್ರಾಮ ಪಂಚಾಯ್ತಿ ಸದಸ್ಯರುಗಳು ಮತ್ತು ಊರಿನ ಮುಖಂಡರುಗಳು ಹಾಜರಿದ್ದರು.