ಅಮೆರಿಕದಲ್ಲಿ ಎನ್‍ಆರ್‍ಐಗಳೊಂದಿಗೆ ವೇಶ್ಯಾವೃತ್ತಿ ದಂಧೆಯಲ್ಲಿ ತೊಡಗಲು ತೆಲುಗು ಮತ್ತು ಕನ್ನಡ ಸಿನಿಮಾ ನಟಿಯರ ಕಳ್ಳಸಾಗಣೆ

ಹೈದರಾಬಾದ್, ಜೂ.15- ಅಮೆರಿಕದಲ್ಲಿ ಎನ್‍ಆರ್‍ಐಗಳೊಂದಿಗೆ ವೇಶ್ಯಾವೃತ್ತಿ ದಂಧೆಯಲ್ಲಿ ತೊಡಗಲು ತೆಲುಗು ಮತ್ತು ಕನ್ನಡ ಸಿನಿಮಾ ನಟಿಯರ ಕಳ್ಳಸಾಗಣೆ ಮಾಡುತ್ತಿದ್ದ ವ್ಯವಸ್ಥಿತ ಅಂತಾರಾಷ್ಟ್ರೀಯ ಜಾಲವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಅಮೆರಿಕದ ತನಿಖಾ ಸಂಸ್ಥೆ ಅಧಿಕಾರಿಗಳು ಹೈದರಾಬಾದ್‍ನ ಟಾಲಿವುಡ್ ಪೆÇ್ರಡಕ್ಷನ್ ಮ್ಯಾನೇಜರ್ ದಂಪತಿಯನ್ನು ಬಂಧಿಸಿದ್ದಾರೆ.
ತೆಲುಗು ಮತ್ತು ಭಾರತದ ಇತರ ಸಮಾವೇಶಗಳಲ್ಲಿ ನೃತ್ಯ ಕಾರ್ಯಕ್ತಮಗಳನ್ನು ನಡೆಸಿಕೊಡುವ ನೆಪದಲ್ಲಿ ಅಮೆರಿಕದಲ್ಲಿನ ಭಾರತೀಯರೊಂದಿಗೆ ಕಮರ್ಷಿಯಲ್ ಸೆಕ್ಸ್ ನಡೆಸಲು ಟಾಲಿವುಡ್ ಮತ್ತು ಬಾಲಿವುಡ್‍ನ ಕೆಲವು ನಟಿಯರನ್ನು ಅಲ್ಲಿಗೆ ಕಳುಹಿಸಿ ವೇಶ್ಯಾವಾಟಿಕೆ ದಂಧೆಗೆ ದೂಡಲಾಗಿತ್ತು ಎಂದು ಹೇಳಲಾಗಿದೆ.
ತೆಲುಗು ಚಿತ್ರರಂಗದ ಪೆÇ್ರಡಕ್ಷನ್ ಮ್ಯಾನೇಜರ್ ದಂಪತಿಯಿಂದ ವೇಶ್ಯಾವಾಟಿಕೆಗಾಗಿ ಚಿಕಾಗೋ ನಗರಕ್ಕೆ ಅಕ್ರಮವಾಗಿ ರವಾನಿಸಲ್ಪಟ್ಟ ಟಾಲಿವುಡ್ ಮತ್ತು ಸ್ಯಾಂಡಲ್‍ವುಡ್‍ನ ಐವರು ನಟಿಯರನ್ನು ದಂಧೆಯಿಂದ ರಕ್ಷಿಸಲಾಗಿದೆ.
ಈ ಪ್ರಕರಣದ ಹೈದರಾಬಾದ್ ಮೂಲದ ಕಿಶನ್ ಮೊಡುಗುಮುಡಿ ಅಲಿಯಾಸ್ ಶ್ರೀರಾಜ್ ಚೆನ್ನುಪಟಿ ಹಾಗೂ ಚಂದ್ರಕಲಾ ಪೂರ್ಣಿಮಾ ಮೊಡುಗುಮುಡಿ ಅಲಿಯಾಸ್ ವಿಭಾ ಜಯಮ್ ಎಂಬುವರನ್ನು ವಾಷಿಂಗ್ಟನ್‍ನಲ್ಲಿ ಬಂಧಿಸಲಾಗಿದೆ. ಇವರು ಕೆಲವು ತೆಲುಗು ಸಿನಿಮಾಗಳಿಗೆ ಪೆÇ್ರಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವು ದಿನಗಳಿಂದ ಇವರು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದರು.
ಇವರಿಬ್ಬರ ವಿರುದ್ಧ ಹೋಮ್‍ಲ್ಯಾಂಡ್ ಸೆಕ್ಯೂರಿಟಿ ಇನ್ವೆಸ್ಟಿಗೇಷನ್ಸ್(ಎಚ್‍ಎಸ್‍ಐ)ನ ಅಮೆರಿಕ ಏಜೆಂಟ್‍ಗಳು ಇಲಿನೋಯ್ಸ್ ಕೋರ್ಟ್‍ನಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ಧಾರೆ.
ಅಮೆರಿಕ ಸಮ್ಮೇಳನ ಹೆಸರಿನಲ್ಲಿ ಗಿರಾಕಿಗಳಿಗೆ ನಟಿಯರ ಪೂರೈಕೆ : ಈ ದಂಪತಿಗಳು ಅಮೆರಿಕದಲ್ಲಿ ನಡೆಯುವ ವಿವಿಧ ಸಮಾವೇಶಗಳು ಹಾಗೂ ಸಮಾರಂಭಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಡಬೇಕೆಂದು ತೆಲುಗು ಮತ್ತು ಕನ್ನಡ ನಟಿಯರು, ರೂಪದರ್ಶಿಗಳು ಹಾಗೂ ನಿರೂಪಕರಿಗೆ ಆಮಿಷವೊಡ್ಡಿ ಚಿಕಾಗೋ ಮತ್ತಿತರ ನಗರಗಳಿಗೆ ಕಳುಹಿಸಲಾಗುತ್ತಿತ್ತು.
ಇವರ ಹೆಸರಿನಲ್ಲಿ ಏರ್‍ಲೈನ್ ಟಿಕೆಟ್‍ಗಳನ್ನು ದಂಪತಿ ಖರೀದಿಸಿ ಹೋಟೆಲ್ ರೂಂಗಳನ್ನು ಬುಕ್ ಮಾಡಲಾಗುತ್ತಿತ್ತು. ಇನ್ನು ಕೆಲವರನ್ನು ಚಿಕಾಗೋದಲ್ಲಿನ ಇವರ ಮನೆಗಳಲ್ಲಿ ಇರಿಸಿಕೊಳ್ಳಲಾಗುತ್ತಿತ್ತು.
ಬಿ-1 ಮತ್ತು ಬಿ-2 ವಿಸಿಟರ್ ವೀಸಾ ಮೇರೆಗೆ ಇವರನ್ನು ಅಲ್ಲಿಗೆ ಕರೆದೊಯ್ಡು ವೇಶ್ಯಾವಾಟಿಕೆ ದಂಧೆಗೆ ಒಳಪಡಿಸಲಾಗುತ್ತಿತ್ತು.
ನಂತರ ದಂಪತಿಗಳು ನಟಿಯರು ಮತ್ತು ನಿರೂಪಕಿಯರನ್ನು ಅಮೆರಿಕದ ವಿವಿಧೆಡೆ ನಡೆಯುತ್ತಿದ್ದ ಸಮಾವೇಶಗಳಿಗೆ ಕರೆದೊಯ್ದು ಅರ್ಹ ಗಿರಾಕಿಗಳನ್ನು ಗುರುತಿಸಿ ವ್ಯವಹಾರ ಕುದುರಿಸಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದರು ಎಂದು ಎಚ್‍ಎಸ್‍ಐ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕದಲ್ಲಿನ ಭಾರತೀಯರು ಮತ್ತು ಅಲ್ಲಿನ ಎನ್‍ಆರ್‍ಐಗಳೊಂದಿಗೆ ಒಂದು ಬಾರಿ ಕ್ರಿಯೆಗಾಗಿ ಈ ದಂಪತಿ 1,000 ದಿಂದ 3,000 ಡಾಲರ್‍ಗಳ ಹಣ ವಸೂಲು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ಅಂತಾರಾಷ್ಟ್ರೀಯ ಕಮರ್ಷಿಯಲ್ ಸೆಕ್ಸ್ ದಂಧೆ ಬಗ್ಗೆ ತನಿಖೆ ಚುರುಕುಗೊಳಿಸಿದ ತನಿಖಾ ಸಂಸ್ಥೆಯ ಏಜೆಂಟ್‍ಗಳು ಪ್ರವಾಸ ದಾಖಲೆಪತ್ರಗಳನ್ನು ವಶಪಡಿಸಿಕೊಂಡು, ಸಂತ್ರಸ್ತರಾದ ನಟಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ಧಾರೆ. ಅಲ್ಲದೇ ದಂಧೆಗಳು ನಡೆದ ಹೋಟೆಲ್ ದಾಖಲೆಗಳು ಹಾಗೂ ನಟಿಯರನ್ನು ಕಮರ್ಷಿಯಲ್ ಸೆಕ್ಸ್‍ಗಾಗಿ ಖರೀದಿಸಿ ಗ್ರಾಹಕರ ಹೇಳಿಕೆಗಳನ್ನು ಪಡೆದಿದ್ದಾರೆ.
ಈ ವ್ಯವಸ್ಥಿತ ವೇಶ್ಯಾವಾಟಿಕೆ ಜಾಲದ ಖಚಿತ ಸುಳಿವಿನ ಮೇರೆಗೆ ಅಮೆರಿಕದ ಗಡಿ ಪಹರೆ ಸಿಬ್ಬಂದಿ ದಂಪತಿಯನ್ನು ಪರಿಶೀಲಿಸಿದಾಗ ಅವರಲ್ಲಿ ಪತ್ತೆಯಾದ ದಾಖಲೆಪತ್ರಗಳು, ಕ್ರೆಡಿಟ್ ಕಾರ್ಡ್‍ಗಳು, ಮತ್ತು ಮಾರಿಟ್ಟೋ ಹೋಟಲ್ ಪ್ಯಾಡ್ ಮೇಲೆ ಬರೆದ ದಂಧೆಯ ಸಂಕೇತಾಕ್ಷರಗಳು ಇದಕ್ಕೆ ಸಾಕಷ್ಟು ಸಾP್ಷÁ್ಯಧಾರಗಳನ್ನು ಒದಗಿಸಿವೆ.
ಒಂದು ಕಾಗದದ ಟಿಪ್ಪಣಿ ಮೇಲೆ ತೆಲುಗು ಚಿತ್ರನಟಿಯ ಹೆಸರು ಬರೆಯಲಾಗಿದೆ ಹಾಗೂ ಜ.19ರಂದು ಬೆಳಗ್ಗೆ, ರೂಮ್ ನಂಬರ್ 2018 ಎರಡು ಬಾರಿ ಹಾಗೂ ರೂಂ ನಂ. 404ರಲ್ಲಿ ಒಂದು ಬಾರಿ ಸೆಕ್ಸ್ ನಡೆಸುವಂತೆ ತಿಳಿಸಲಾಗಿದೆ. ಚಿಕಾಗೋದಲ್ಲಿನ ದಂಪತಿ ಮನೆ ಮೇಲೆ ಇತ್ತೀಚೆಗೆ ಸರ್ಚ್ ವಾರೆಂಟ್ ಮೇಲೆ ಇತ್ತೀಚೆಗೆ ನಡೆಸಿದ ದಾಳಿ ವೇಳೆ ಅಧಿಕಾರಿಗಳು ಅನೇಕ ಝಿಪ್‍ಲಾಕ್‍ಗಳಿಂದ ಬ್ಯಾಗ್‍ಗಳಿಂದ 70 ಕಾಂಡೋಮ್‍ಗಳು, ಕಿಶನ್ ಹೆಸರಿನಲ್ಲಿದ್ದ ನಕಲಿ ಖಾಯಂ ನಿವಾಸ ಕಾರ್ಡ್ ಹಾಗೂ ಸೆಕ್ಯುರಿಟಿ ಕಾರ್ಡ್‍ನನ್ನು ವಶಪಡಿಸಿಕೊಳ್ಳಲಾಗಿದೆ.
ನಿರ್ದಿಷ್ಟ ವ್ಯಕ್ತಿಗಳಿಗಾಗಿ (ನಟಿಯರು, ರೂಪದರ್ಶಿಗಳು ಮತ್ತು ನಿರೂಪಕಿಯರು) ವೀಸಾಗಳನ್ನು ನೀಡುವಂತೆ ಹೈದರಾಬಾದ್‍ನ ಅಮೆರಿಕ ಕಾನ್ಸುಲ್ ಜನರಲ್‍ಗೆ ಅಮೆರಿಕನ್ ತೆಲುಗು ಅಸೋಸಿಯೇಷನ್(ಎಟಿಎ)ನಿಂದ ಬರೆದ ಪತ್ರವೊಂದರ ಪ್ರತಿಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ. ಯುಎಸ್ ಕಾನ್ಸುಲೇಟ್‍ನ ಬಿ1-ಬಿ2 ವೀಸಾಗಾಗಿ ನೇಮಕ ಪತ್ರದ ಪ್ರತಿಯೂ ಸಹ ಪತ್ತೆಯಾಗಿದೆ.
ಈ ದಂಧೆಯಿಂದ ರಕ್ಷಿಸಲ್ಪಟ್ಟ ತೆಲುಗು ಚಿತ್ರತಾರೆಯೊಬ್ಬರು ಕಳೆದ ನವೆಂಬರ್ 18ರಂದು ಕ್ಯಾಲಿಫೆÇೀರ್ನಿಯಾದಲ್ಲಿ ನಡೆದ ತೆಲುಗು ಅಸೋಸಿಯೇಷನ್ ಆಫ್ ಸೌತ್ ಕ್ಯಾಲಿಫೆÇೀರ್ನಿಯಾ (ಟಿಎಎಸ್) ಸ್ಟಾರ್‍ನೈಟ್‍ನಲ್ಲಿ ಭಾಗವಹಿಸಲು ಅಮೆರಿಕಗೆ ಬಂದು ನಂತರ ಚಿಕಾಗೋದಲ್ಲಿ ಈ ದಂಧೆಯಲ್ಲಿ ಸಿಲುಕಿದ್ದರು ಎಂಬುದು ಅಮೆರಿಕ ಕೋರ್ಟ್ ದಾಖಲೆಪತ್ರಗಳು ಬಹಿರಂಗಗೊಳಿಸಿವೆ.
ಈ ಜಾಲದಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಶಂಕೆ ಇದ್ದು ತನಿಖೆ ತೀವ್ರಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ