ಅಕ್ಷರ ಯೋಗ ಅಕಾಡೆಮಿಯಿಂದ 4ನೆ ವರ್ಷದ ಅಂತಾರಾಷ್ಟ್ರೀಯ ಯೋಗ ದಿನ

 

ಬೆಂಗಳೂರು, ಜೂ.14- ದೇಶದಲ್ಲಿನ ಅತಿದೊಡ್ಡ ಯೋಗ ತರಬೇತಿ ಸರಪಳಿಗಳಲ್ಲಿ ಒಂದಾಗಿರುವ ಅಕ್ಷರ ಯೋಗ ಅಕಾಡೆಮಿ ಇದೇ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 6ರ ವರೆಗೆ ಹೆಬ್ಬಾಳ-ನಾಗವಾರ ರಿಂಗ್ ರಸ್ತೆಯ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‍ನಲ್ಲಿ ಬೃಹತ್ ಮಟ್ಟದಲ್ಲಿ 4ನೆ ವರ್ಷದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

2018ರ ಅಂತರರಾಷ್ಟ್ರೀಯ ಯೋಗ ದಿನವು ಜೂ.21ರ ಗುರುವಾರ ಬಂದಿರುವುದರಿಂದ ಅಕ್ಷರ ಯೋಗ ಅಕಾಡೆಮಿ ಜೂ.17ರಂದು ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂದು 2000 ವಿಶಿಷ್ಟ ಚೇತನ ಮಕ್ಕಳು ವಿವಿಧ ರೀತಿಯ ಯೋಗಾಸನಗಳನ್ನು ಮಾಡಲಿದ್ದಾರೆ.
ಅವರಲ್ಲಿ 200ಕ್ಕೂ ಹೆಚ್ಚು ಮಕ್ಕಳು ದೃಷ್ಟಿಹೀನರಾಗಿದ್ದು, ಅವರಿಗೆ ಸಹಾಯ ಮಾಡಲು ಸುಮಾರು 100 ಯೋಗ ಶಿಕ್ಷಕರು ಹಾಗೂ 10,000ಕ್ಕೂ ಹೆಚ್ಚು ಯೋಗಾಸಕ್ತರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಅಕ್ಷರ ಯೋಗ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿ ಮಹಾಯೋಗಿ ಅಕ್ಷರ್‍ನಾಥ್, ಇಸ್ರೇಲ್ ಕನ್ಸುಲೇಟ್ ಜನರಲ್ ದಾನ ಕುರ್ಶ್ ಕಾನೂನು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವರಾದ ಕೃಷ್ಣ ಭೆರೇಗೌಡ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಸ್ಯಾಂಡಲ್‍ವುಡ್ ಪವರ್‍ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ನಟಿ ಸಂಜನಾ ಅರ್ಚನಾ ಗರ್ಲಾನಿ, ದೀಪಕ್ ಅಜ್ಮೆರಾ, ಕಲಾದೇವಿ, ಪಂಕಜ್ ವರ್ಣೇಕರ್, ಡಾ. ನಾಗಾಂಬಿಕಾ ದೇವಿ,ಡಾ.ಆರ್.ಪಿ. ಶರ್ಮ, ಡಾ. ಆರ್.ವಿ. ಮಮತಾ ದೇವರಾಜ್, ನಿಧಿ, ತರುಣ್, ಡಾ.ಶಾಲಿನಿ ರಜನೀಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಮಕ್ಕಳಿಗೆ ಬೇಕಾದ ಆಹಾರ, ತಿಂಡಿಗಳು, ಜ್ಯೂಸ್ ಹಾಗೂ ಟಿ-ಶರ್ಟ್‍ಗಳನ್ನು ಪ್ರಾಯೋಜಕರು ಒದಗಿಸಲಿದ್ದಾರೆ.
ಹೆಚ್ಚಿನ ಮಾಹಿತಿಗೆ 9986121226, 080-40952324ಗೆ ಸಂಪರ್ಕಿಸಲು ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ