ದಕ್ಷಿಣ ಕಾಶಿ ಶಿವಗಂಗಾ ಕ್ಷೇತ್ರದ ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ 9,06,941 ರೂ. ಸಂಗ್ರಹ

ದಾಬಸ್‍ಪೇಟೆ, ಜೂ.14- ಸೋಂಪುರ ಹೋಬಳಿಯ ದಕ್ಷಿಣ ಕಾಶಿ ಶಿವಗಂಗಾ ಕ್ಷೇತ್ರದ ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ 9,06,941 ರೂ. ಸಂಗ್ರಹವಾಗಿದೆ.
ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಕೆ.ಪದ್ಮಾ, ಕಾರ್ಯನಿರ್ವಹಣಾಧಿಕಾರಿ ಎಂ.ನಾರಾಯಣಸ್ವಾಮಿ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕಿ ಅನುಸೂಯಮ್ಮ ದೇವಾಲಯದ ಹುಂಡಿಯಲ್ಲಿನ ಹಣದ ಎಣಿಕೆ ಕಾರ್ಯ ಮಾಡಿದರು.
9,06,941 ರೂ.ಗಳು ಹುಂಡಿಗಳಿಂದ ಸಂಗ್ರಹವಾಗಿದ್ದು, 2000 ರೂ.ಗಳ 40 ನೋಟು, 500 ರೂ.ಗಳ 331 ನೋಟು, 200 ರೂ.ಗಳ 38 ನೋಟು, 100 ರೂ.ಗಳ 3130 ನೋಟು, 50 ರೂ.ಗಳ 1966 ನೋಟು, 20 ರೂ.ಗಳ 3393 ನೋಟು, 10 ರೂ.ಗಳ 10632 ನೋಟುಗಳು, 5 ರೂ.ಗಳ ನೋಟು 140 ದೊರೆತಿದ್ದು, ನಾಣ್ಯಗಳ ರೂಪದಲ್ಲೂ ಕಾಣಿಕೆ ಸಂಗ್ರಹವಾಗಿದೆ. ಅಲ್ಲದೆ, ಅಮಾನೀಕರಣಗೊಂಡ ನೋಟುಗಳು ಪತ್ತೆಯಾಗಿವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೇವಾಲಯ ವ್ಯವಸ್ಥಾಪಕ ಅಧ್ಯಕ್ಷೆ. ಬಿ.ಮಂಗಳಾ ಸುರೇಶ್, ಸದಸ್ಯರಾದ ಎಸ್.ಟಿ.ಸಿದ್ದರಾಜು, ಸಿದ್ದಗಂಗಮ್ಮ ತಮ್ಮಯ್ಯ ಬಿ.ಸಿ. ರಾಜಣ್ಣ, ಎಸ್. ರೇಣುಕೇಶ, ಎಚ್. ಹನುಮಂತರಾಜು, ಗ್ರಾಮಲೆಕ್ಕಿಗ ವಿ.ಬಾಲಚಂದ್ರ, ಪಾರುಪತ್ತೇದಾರ್ ಟಿ. ಶ್ರೀನಿವಾಸ್, ಸಿಬ್ಬಂದಿಗಳಾದ ಸಿದ್ದಪ್ಪ, ರಮೇಶ್ ಹಾಗೂ 50ಕ್ಕೂ ಹೆಚ್ಚು ಜನ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ