ನಡೆದುಕೊಂಡು ಹೋಗುತ್ತಿದ್ದ ಸಾಫ್ಟ್‍ವೇರ್ ಕಂಪೆನಿ ನೌಕರನನ್ನು ಅಡ್ಡಗಟ್ಟಿದ ಮೂವರು ದರೋಡೆಕೋರರು ಅವರನ್ನು ಬೆದರಿಸಿ ಉಂಗುರ, ಮೊಬೈಲ್ ಹಾಗೂ ಸರವನ್ನು ದೋಚಿ ಪರಾರಿ

 

ಬೆಂಗಳೂರು, ಜೂ.14- ನಡೆದುಕೊಂಡು ಹೋಗುತ್ತಿದ್ದ ಸಾಫ್ಟ್‍ವೇರ್ ಕಂಪೆನಿ ನೌಕರನನ್ನು ಅಡ್ಡಗಟ್ಟಿದ ಮೂವರು ದರೋಡೆಕೋರರು ಅವರನ್ನು ಬೆದರಿಸಿ ಉಂಗುರ, ಮೊಬೈಲ್ ಹಾಗೂ ಸರವನ್ನು ದೋಚಿ ಪರಾರಿಯಾಗಿರುವ ಘಟನೆ ಪುಲಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಫ್ರೆಜರ್‍ಟೌನ್ ಒಂದನೇ ಕ್ರಾಸ್ ಸಿಸಿ ರಸ್ತೆ ಮೂಲಕ ಸಾಫ್ಟ್‍ವೇರ್ ಕಂಪೆನಿ ನೌಕರ ಅರುಣಾಚಲಂ ಎಂಬುವರು ನಿನ್ನೆ ಮುಂಜಾನೆ 4.30ರಲ್ಲಿ ಕೆಲಸಕ್ಕೆ ನಡೆದು ಹೋಗುತ್ತಿದ್ದರು.
ಈ ವೇಳೆ ಮೂವರು ದರೋಡೆಕೋರರು ಬೈಕ್‍ನಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಬೆದರಿಸಿ ಸರ, ಉಂಗುರ, ಮೊಬೈಲ್ ಕಸಿದುಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 90ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಅರುಣಾಚಲಂ ಅವರು ಪುಲಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ