
ಕೆ.ಆರ್.ಪೇಟೆ, ಜೂ.14- ಬೈಕ್ ಮತ್ತು ಆಟೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಕಟ್ಟೆ ಕ್ಯಾತನಹಳ್ಳಿ ಬಳಿ ರಾತ್ರಿ ನಡೆದಿದೆ.
ಕಟ್ಟೆಕ್ಯಾತನಹಳ್ಳಿಯ ತಮ್ಮೇಗೌಡ ಅವರ ಮಗ ರಾಜ್ಕುಮಾರ್(38) ಮೃತ ದುರ್ದೈವಿ.
ಘಟನೆ ವಿವರ: ರಾಜ್ಕುಮಾರ್ ಅವರು ತಮ್ಮ ಬೈಕ್ನಲ್ಲಿ ಕೆಲಸದ ನಿಮಿತ್ತ ಸೋಮನಹಳ್ಳಿ ಹೋಗಿ ವಾಪಸ್ ಸ್ವ ಗ್ರಾಮಕ್ಕೆ ಬರುತ್ತಿದ್ದಾಗ ಎದುರಿನಿಂದ ಬಂದ ಆಟೋ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ರಾಜ್ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಕೆ.ಆರ್.ಪೇಟೆಯ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಗ್ರಾಮಾಂತರ ಠಾಣೆಯ ಪೆÇಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ಕೆ.ಎನ್.ಗಿರೀಶ್ ಅವರು ಭೇಟಿ ನೀಡಿ ಮಹಜರು ನಡೆಸಿದರು.