ಶಿರಸಿ ಸಬ್ ಜೈಲ್ ಸ್ಥಗಿತಕ್ಕೆ ವಿರೋಧ

ಶಿರಸಿ: ಸ್ಥಳೀಯ ಉಪ ಕಾರಾಗೃಹ ಸಿಬ್ಬಂದಿಗಳ ಕೊರತೆಯಿಂದ ಕಾರಾಗೃಹದ ಚಟುವಟಿಕೆಯನ್ನು ಕಾರವಾರಕ್ಕೆ ವರ್ಗಾಯಿಸಿರುವ ಕ್ರಮವನ್ನು ಶಿರಸಿ ವಕೀಲರ ಸಂಘವು ಪ್ರಬಲವಾಗಿ ಖಂಡಿಸಿದೆ ಎಂದು ವಕೀಲರ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿರುವ ಹಿನ್ನೆಲೆಯಲ್ಲಿ ಉಚ್ಛನ್ಯಾಯಾಲಯದ ಆದೇಶದಂತೆ ಸ್ಥಗಿತಗೊಂಡಿರುವ ಉಪ ಕಾರಾಗೃಹ ಕಳೆದ 2 ವರ್ಷದ ಹಿಂದೆ ಪ್ರಾರಂಭವಾಗಿದ್ದು ಇತ್ತೀಚಿಗೆ ಇರುವಂಥ ಸಿಬ್ಬಂದಿಗಳು ದೀರ್ಘ ಕಾಲಾವಧಿ ರಜೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ತುರ್ತು ಬದಲೀ ಸಿಬ್ಬಂದಿಯನ್ನು ನೇಮಿಸಲು ಇಲಾಖೆ ಅಸಮರ್ಥವಾಗಿರುವುದರಿಂದ ಸದ್ರಿ ಉಪಕಾರಾಗೃಹದಲ್ಲಿ ದಾಖಲಿರುವ ವಿಚಾರಣಾ ಬಂಧಿಗಳನ್ನು ಕಾರವಾರಕ್ಕೆ ವರ್ಗಾಯಿಸುವಂತೆ ಸ್ಥಳೀಯ ಅಧೀಕ್ಷಕರು ಉಪ ಕಾರಾಗೃಹದವರ ವಿನಂತಿ ಮೇರೆಗೆ ವಿಚಾರಣಾ ಬಂಧಿಗಳನ್ನು ಜಿಲ್ಲಾ ಕಾರಾಗೃಹ ಕಾರವಾರಕ್ಕೆ ವರ್ಗಾಯಿಸುವಂತೆ ಹಾಗೂ ವಿಚಾರಣಾ ಖೈದಿಗಳನ್ನು ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸುವಾಗ ಸೂಕ್ತ ಭದ್ರತೆಯೊಂದಿಗೆ ಕ್ರಮ ಜರುಗಿಸುವಂತೆ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಅನುಮತಿ ಹಾಗೂ ನಿರ್ದೇಶನದ ಮೇರೆಗೆ ಸ್ಥಳೀಯ ಉಪ ಕಾರಾಗೃಹದ ಕಾರ್ಯವು ಕಾರವಾರಕ್ಕೆ ವರ್ಗಾಯಿಸಲ್ಪಡುತ್ತಿದೆ.

ಜಿಲ್ಲಾಧಿಕಾರಿ ಆಸಕ್ತಿ:

ಪ್ರಾರಂಭವಾಗಿದನಿಂದಲೂ ಸ್ಥಳೀಯ ಉಪ ಕಾರಾಗೃಹಕ್ಕೆ ಸಿಬ್ಬಂದಿಗಲ ಕೊರತೆ ನೀಗಿಸಲು ಜಿಲ್ಲಾಧಿಕಾರಿ ಕಾರವಾರ ಕರ್ನಾಟಕ ಕಾರಾಗೃಹದ ಮಹಾ ನಿರೀಕ್ಷಕರಿಗೂ ಪತ್ರದ ಮೂಲಕ ಕೋರಿಕೊಂಡಾಗಲೂ ಜಿಲ್ಲಾಧಿಕಾರಿಗಳ ಆಸಕ್ತಿ ಕೊರತೆ ಹಾಗೂ ತುರ್ತಾಗಿ ಸ್ಥಳೀಯ ಉಪಕಾರಾಗೃಹದ ಸಮಸ್ಯೆಗಳಿಗೆ ಕಾರಾಗೃಹ ಮಹಾನಿರೀಕ್ಷಕರು ಸ್ಪಂದಿಸದೇ ಶಿರಸಿ ಉಪ ಕಾರಾಗೃಹದ ಕಾರ್ಯ ಕಾರವಾರಕ್ಕೆ ವರ್ಗಾಯಿಸಲ್ಪಟ್ಟಿರುವುದು ವಿಷಾದಕರ. ಇದರಿಂದ ಶಿರಸಿ ಸಿದ್ದಾಪುರ ಭಾಗದ ಖೈದಿಗಳಿಗೆ ಅನಾನುಕೂಲವಾಗಿರುವುದಲ್ಲದೇ ಸಾಯಂಕಾಲ ಕೋರ್ಟ ಕಲಾಪದ ಅವಧಿಯ ನಂತರ ಕಾರವಾರಕ್ಕೆ ನೇರವಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಅನಾವಶ್ಯವಾಗಿ ಖೈದಿಗಳಿಗೆ ವಿಶೇಷ ಭದ್ರತೆ ಪೋಲೀಸ ನಿಯೋಜನೆ ಮಾಡುವಂಥದ್ದು ಮುಂತಾದ ಆಡಳಿತಾತ್ಮಕ ತೊಂದರೆಗಳು ಇರುವುದರಿಂದ ಅತೀ ಶೀಘ್ರದಲ್ಲಿ ಕಾರ್ಯ ಪುನರ್ ಆರಂಭಿಸುವಂತೆ ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ ಕಾರ್ಯದರ್ಶಿ ಆರ್. ಆರ್. ಹೆಗಡೆ ಅವರು ಇಂದು ತಹಸೀಲದಾರ ಎಮ್.ಆರ್. ಕುಲಕರ್ನಿಯ ಜೊತೆಯಲ್ಲಿ ಉಪ ಕಾರಾಗೃಹಕ್ಕೆ ಭೇಟಿ ನೀಡಿದಂತ ಸಂದರ್ಭದಲ್ಲಿ ಹೇಳಿದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ