ಮಾಸ್ಕೊ:ಜೂ-14: ಕ್ರೀಡೆಯಿಂದ ರಾಜಕೀಯವನ್ನು ದೂರ ಇರಿಸಿ ವಿಶ್ವಕಪ್ ಫುಟ್ಬಾಲ್ ಟೂರ್ನಿ ಆಯೋಜಿಸಲು ಅವಕಾಶ ಮಾಡಿ ಕೊಟ್ಟ ಫಿಫಾಗೆ ಅಭಿನಂದನೆಗಳು ಸಲ್ಲಲೇಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಕ್ರೀಡೆಯ ಬಗೆಗಿನ ಬದ್ಧತೆಯನ್ನು ಉಳಿಸಿಕೊಂಡಿರುವುದು ಫಿಫಾದ ಆಡಳಿತಗಾರರ ದೊಡ್ಡ ಗುಣ. ಅವರ ಕಾಳಜಿಯಿಂದಾಗಿ ಫುಟ್ಬಾಲ್ನಲ್ಲಿ ರಾಜಕೀಯ ಸೇರಲು ಅವಕಾಶ ಸಿಗಲಿಲ್ಲ’ ಎಂದು ಅವರು ಅಭಿಪ್ರಾಯ ಪಟ್ಟರು.
ಇನ್ನು ಅರ್ಜೆಂಟೀನಾದ ನೆಸ್ಟರ್ ಪಿಟಾನ ಅವರು ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಣ ಉದ್ಘಾಟನಾ ಪಂದ್ಯದಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ವಿಷಯವನ್ನು ಫಿಫಾ, ಬುಧವಾರ ಪ್ರಕಟಿಸಿದೆ. 42ರ ಹರೆಯದ ಪಿಟಾನ, 2014ರಲ್ಲಿ ಬ್ರೆಜಿಲ್ನಲ್ಲಿ ನಡೆದಿದ್ದ ಟೂರ್ನಿಯಲ್ಲೂ ರೆಫರಿಯಾಗಿ ಕೆಲಸ ಮಾಡಿದ್ದರು.