ಆಪರೇಷನ್‌ ಬ್ಲೂ ಸ್ಟಾರ್‌ ಕಡತ ಬಹಿರಂಗಕ್ಕೆ ಬ್ರಿಟನ್ ಕೋರ್ಟ್ ಆದೇಶ

Varta Mitra News

ಲಂಡನ್‌: ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆಯಲ್ಲಿ ಬ್ರಿಟನ್‌ ಸರ್ಕಾರ ವಹಿಸಿರುವ ಪಾತ್ರದ ಬಗ್ಗೆ ಮಾಹಿತಿ ಹೊಂದಿದೆ ಎನ್ನಲಾದ ಗೌಪ್ಯ ಕಡತಗಳನ್ನು ಬಹಿರಂಗಗೊಳಿಸಬೇಕು ಎಂದು ಬ್ರಿಟನ್‌ ಕೋರ್ಟ್ ಆದೇಶಿಸಿದೆ.

ಕಡತ ಬಹಿರಂಗಪಡಿಸುವುದರಿಂದ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂಬ ಬ್ರಿಟಿಷ್ ಸರ್ಕಾರದ ವಾದವನ್ನು ತಳ್ಳಿಹಾಕಿದ ಮಾಹಿತಿ ನ್ಯಾಯಾಲಯ ನ್ಯಾಯಾಧೀಶ ಮರ್ರಿ ಷಾಂಕ್ಸ್ ಅವರು, ಬ್ಲೂ ಸ್ಟಾರ್‌ ಕಾರ್ಯಾಚರಣೆಯ ಅವಧಿಗೆ ಸಂಬಂಧಿಸಿದ ಕಡತಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಸೂಚಿಸಿದ್ದಾರೆ.

ಆಪರೇಷನ್‌ ಬ್ಲೂ ಸ್ಟಾರ್‌ ಗೆ ಸಂಬಂಧಿಸಿದ ಮಾಹಿತಿ ಕೋರಿ ಫ್ರಿಲ್ಯಾನ್ಸ್ ಪತ್ರಕರ್ತ ಫಿಲ್ ಮಿಲ್ಲರ್ ಅವರು ಅರ್ಜಿ ಸಲ್ಲಿಸಿದ್ದರು.

ಗೌಪ್ಯ ಕಡತಗಳನ್ನು ಬಹಿರಂಗಗೊಳಿಸುವುದರಿಂದ ಕಾರ್ಯಾಚರಣೆಯಲ್ಲಿ ಬ್ರಿಟನ್‌ ಪಾಲ್ಗೊಂಡಿದೆಯೇ ಎಂಬ ಬಗ್ಗೆ ನಿಖರ ಮಾಹಿತಿ ದೊರಕಲಿವೆ ಎನ್ನುವುದು ಮಿಲ್ಲರ್ ಭಿಪ್ರಾಯವಾಗಿದೆ.

ಈ ಹಿಂದೆಯೂ  ಸಿಖ್‌ ಒಕ್ಕೂಟವೊಂದು ಕಡತಗಳನ್ನು ಬಹಿರಂಗಗೊಳಿಸಬೇಕು ಎಂದು  ಮಾಹಿತಿ ಆಯುಕ್ತರಿಗೆ ದೂರು ಸಲ್ಲಿಸಿತ್ತು. ಆದರೆ ‘ಅತಿ ಸೂಕ್ಷ್ಮ ಕಡತಗಳು’ ಎಂಬ ಕಾರಣಕ್ಕೆ ಇವುಗಳನ್ನು ಬಹಿರಂಗಗೊಳಿಸಲಾಗಿರಲಿಲ್ಲ.

1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ನಡೆದಿದ್ದ ಆಪರೇಷನ್‌ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ನೂರಾರು ಸಿಖ್ಖರನ್ನು ಹತ್ಯೆ ಮಾಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ