ದೇವನಹಳ್ಳಿ ಜನತೆಗೆ ಬಿಎಂಟಿಸಿ ಇಂದ ಅನ್ಯಾಯ

ದೇವನಹಳ್ಳಿ :ಪಟ್ಟಣದಿಂದ ಬೆಂಗಳೂರು ನಗರಕ್ಕೆ ಪ್ರಯಾಣಿಸುವ ದೈನಂದಿನ ಮತ್ತು ಮಾಸಿಕ ಪಾಸ್ ಹೊಂದಿರುವ ಪ್ರಯಾಣಿಕರಿಗೆ ಅನ್ಯಯವಾಗುತ್ತಿದೆ ಎಂದು ಇಂದು ಬೆಳಗ್ಗೆ ದೇವನಹಳ್ಳಿ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಬಸ್ ಗಳನ್ನು ತಡೆದು ಪ್ರತಿಭಟಿಸಿದರು
ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರು ಬೆಳಿಗ್ಗೆ ಆರು ರೂಪಾಯಿ ನೀಡಬೇಕು ಸಂಜೆ ವಾಪಸ್ಸು ಬರುವಾಗ ಆರು ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕು ಇದರಿಂದ ದಿನನಿತ್ಯ ನಗರಕ್ಕೆ ತೆರಳುವ ಪ್ರ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ದಿನನಿತ್ಯ ದೇವನಹಳ್ಳಿಯಿಂದ ನಗರಕ್ಕೆ ತೆರಳುವ ಬಿ ಎಂ ಟಿಸಿ ಬಸ್ಸುಗಳು ಸಾದಹಳ್ಳಿ ಬಳಿ ಇರುವ ನವಯುಗ ಟೋಲ್ ನಲ್ಲಿ ಡಬಲ್ (ಹೋಗಿ ಬರಲು) 405 ರೂಪಾಯಿಗಳನ್ನು ಪಾವತಿ ಮಾಡಬೇಕು ಅಥವಾ ಹೋಗುವುಕ್ಕೆ 264 ರೂಗಳನ್ನು ಪಾವತಿಸಬೇಕು ಇದೆ ಏಪ್ರಿಲ್ ತಿಂಗಳಿನಲ್ಲಿ ನವಯುಗ ಟೋಲ್ ದರ ಏರಿಕೆ ಮಾಡಿದ್ದಾರೆ ಅದರಿಂದ ಟೋಲ್ ನಲ್ಲಿ ಪಾವತಿಸಬೇಕಾದ ಹೆಚ್ಚುವರಿ ಹಣವನ್ನು ಬಿಎಂಟಿಸಿ ಪ್ರಯಾಣಿಕರ ಮೇಲೆ ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮತ್ತು ಹೊಸಕೋಟೆ ನಗರಗಳಿಗೆ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡಬೇಕಾದರೆ ಟೋಲ್‍ಗಳು ಕಾರ್ಯ ನಿರ್ವಹಿಸುತ್ತಿವೆ ಆದರೆ ಆ ಪಟ್ಟಣಗಳಿಗೆ ಇಂತಹ ಸಮಸ್ಯೆ ಎದುರಾಗುವುದಿಲ್ಲ ಬರಿ ದೇವನಹಳ್ಳಿ ಪಟ್ಟಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಇಂತಹ ಸಮಸ್ಯೆ ಉಂಟಾಗಿದೆ ಇದೆ ವೇಳೆ ಮಾತನಾಡಿದ ಪ್ರಯಾಣಿಕರು ಈ ರಸ್ತೆಯಲ್ಲಿ ಸರ್ವೀಸ್ ರಸ್ತೆ ಇಲ್ಲದೆ ಇರುವುದು ಕಾರಣ ದೇವನಹಳ್ಳಿ ಜನತೆಯ ಕೃಷಿ ಭೂಮಿಗಳನ್ನು ವಶಕ್ಕೆ ಪಡೆದು ರಸ್ತೆ ಅಭಿವೃದ್ಧಿಗೊಳಿಸಿ ಈಗ ನಮ್ಮ ಬಳಿಯೆ ಹಣ ವಸೂಲಿ ಮಾಡುತ್ತಿದ್ದಾರೆ ಈ ರೀತಿ ಟೋಲ್ ಸಂಗ್ರಹ ಮಾಡಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು ಟೋಲ್ ಸಂಗ್ರಹಕ್ಕೆ ಒಳಪಟ್ಟ ರಸ್ತೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕು ಆದರೆ ನವಯುಗ ಟೋಲ್ ಬಳಿ ಸರ್ವಿಸ್ ರಸ್ತೆಯೇ ಇಲ್ಲ ನಮ್ಮ ಜಮೀನು ಗಳನ್ನು ವಶಪಡಿಸಿಕೊಂಡು ನಮ್ಮ ಬಳಿಯೇ ಹಣ ವಸೂಲಿ ಮಾಡಲಾಹುತ್ತಿದೆ ಯಾವನ್ಯಾಯ
ದೇವನಹಳ್ಳಿ ಪಟ್ಟಣದ ಜನತೆಗೆ ಈರೀತಿ ಪದೆಪದೆ ತೊಂದರೆಯಾಗುತ್ತಿರುವುದು ಖಂಡನೀಯ ಈರೀತಿ ತೊಂದರೆಯಾದ ಸಂದರ್ಭದಲ್ಲಿ ಕೆಲ ರಾಜಕೀಯ ಮುಖಂಡರು ಸಂಘಟನೆಗಳು ತಮ್ಮ ಬೇಳೆ ಬೇಯಿಸುಕೊಳ್ಳುತ್ತಾರೆ ರಾಜ್ಯದಲ್ಲಿ ಅತಿಹೆಚ್ಚು ದುಬಾರಿ ಬೆಲೆಯ ಟೋಲ್ ಈ ನವಯುಗ ಟೋಲ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ