ಜಯನಗರದ ಜಯ ಮಾಲೆ ಕಾಂಗ್ರೇಸ್ ನ ಸೌಮ್ಯಾರೆಡ್ಡಿಗೆ

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಬಿಎನ್ ವಿಜಯ್ ಕುಮಾರ್ ಸಾವಿನಿಂದ ಮುಂದೂಡಿದ್ದ ಜಯನಗರ ವಿಧಾನ ಸಭಾಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ 2,889 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಮೊದಲನೆ ಸುತ್ತಿನಿಂದಲು ಮುನ್ನಡೆಯಲ್ಲಿ ದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ವಿರುದ್ದ ಜಯಗಳಿಸಿದ್ದಾರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಸೌಮ್ಯರೆಡ್ಡಿ 54,457 ಮತಗಳನ್ನು ಪಡೆದರೆ ಬಿಜೆಪಿ ಅಭರ್ಥಿ ಬಿಎನ್ ಪ್ರಹ್ಲಾದ್ ಬಾಬು 51,568 ಮತಗಳು ಪಕ್ಷೇತರ ಅಭರ್ಥಿ ರವಿಕೃಷ್ಣಾರೆಡ್ಡಿ 1,861 ಮತಗಳನ್ನು ಪಡೆದು ಠೇವಣಿಯನ್ನ ಕಳೆದುಕೊಂಡಿದ್ದಾರೆ ಇನ್ನು ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಹಿಂಪಡೆದುಕೊಂಡಿತ್ತು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ