
ಪಣಜಿ, ಜೂ.13-ಗೋವಾದ ಕೈಗಾರಿಕೆಯೊಂದರ ಮೇಲೆ ದಾಳಿ ನಡೆಸಿದ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು 5ಕೋಟಿ ರೂ. ಮೌಲ್ಯದ 100ಕೆಜಿ ನಿಷೇಧಿತ ಕೆಟಮನೈನ್ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಾರ್ಖಾನೆಯ ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ.
ರಾಜಧಾನಿ ಪಣಜಿಯಿಂದ 60ಕಿಮೀ ದೂರದಲ್ಲಿರುವ ಉತ್ತರ ಗೋವಾ ಜಿಲ್ಲೆಯ ಸಟ್ಯಾರಿ ತಾಲ್ಲೂಕಿನ ಡಿಸ್ಸೂರ್‍ಲೆಮ್ ಕೈಗಾರಿಕಾ ಪ್ರದೇಶದ ಕಾರ್ಖಾನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಡ್ರಗ್ಸ್‍ಗಳನ್ನು ಜಪ್ತಿ ಮಾಡಿದ್ದಾರೆ ಎಂದು ನಿರ್ದೇಶನಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.