
ಬೆಂಗಳೂರು: ನಾನು ಕಲಿತದ್ದು 8 ನೇ ತರಗತಿ ನನಗೆ ಉನ್ನತ ಶಿಕ್ಷಣ ಖಾತೆ ಬೇಡ ಎಂದು ಪಟ್ಟು ಹಿಡಿದಿದ್ದ ಸಚಿವ, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಕೊನೆಗೂ ತಮ್ಮ ಖಾತೆ ಬದಲಾವಣೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಆಗಮಿಸಿದ ಜಿಟಿಡಿ ಮಾತುಕತೆ ನಡೆಸಿ ಖಾತೆ ಬದಲವಾಣೆಯನನು ಖಚಿತ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ ಖಾತೆ ಬದಲಾವಣೆ ಇವತ್ತು ನಾಳೆ ಅಂತಿಮವಾಗುತ್ತದೆ. ರೈತರಿಗೆ ಹತ್ತಿರವಾಗಿರುವ ಖಾತೆ ನೀಡುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೆ ಈಗ ನೀಡಿರುವ ಖಾತೆಯಲ್ಲಿ ಪ್ರವೇಶ ಮಾಡುವುದಿಲ್ಲ ಎಂದಿದ್ದಾರೆ.