ನವದೆಹಲಿ, ಜೂ.12-ಇನ್ನು 365 ದಿನಗಳ ಒಳಗೆ ದೇಶದಲ್ಲಿ ಲೋಕಸಭೆ ಹಾಗೂ ಎಂಟು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಕುರುಕ್ಷೇತ್ರಕ್ಕೆ ಈಗಿನಿಂದಲೇ ಸಿದ್ದತೆಗಳು ಆರಂಭಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಮಹಾಮೈತ್ರಿಗೆ ವಿಪಕ್ಷಗಳು ಒಗ್ಗೂಡುತ್ತಿರುವಾಗಲೇ ಲೋಕಸಭೆ ಹಾಗೂ 8 ರಾಜ್ಯಗಳ ವಿಧಾನಸಭೆ ಚುನಾವಣೆಗಳು ಕದನ ಕುತೂಹಲ ಕೆರಳಿಸಲಿವೆ.
ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ತಾನ, ಒಡಿಶಾ, ಛತ್ತೀಸ್ಗಢ. ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಚುನಾವಣೆಗಳು ಇನ್ನೊಂದು ವರ್ಷಗಳ ಒಳಗಾಗಿ ನಡೆಯಲಿದ್ದು, ಈಗಿನಿಂದಲೇ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿದೆ. ಮುಂದಿನ ವರ್ಷ ನವೆಂಬರ್ನಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆಗಳು ಜರುಗಲಿವೆ.
ಇನ್ನು ಆರು ತಿಂಗಳಲ್ಲಿ ಅಂದರೆ ಹೊಸ ವರ್ಷದ ಮೊದಲ ತಿಂಗಳಲ್ಲೇ ಛತ್ತೀಸ್ಗಢ, ಮಧ್ಯಪ್ರದೇಶ ಹಾಗೂ ರಾಜಸ್ತಾನ-ಈ ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ನಡೆಯಲಿದೆ.
ಛತ್ತೀಸ್ಗಢದ 90 ವಿಧಾನಸಭಾ ಕ್ಷೇತ್ರಗಳಿಗೆ ಜನವರಿ 5, ಮಧ್ಯಪ್ರದೇಶದ 230 ಕ್ಷೇತ್ರಗಳಿಗೆ ಜ.7 ಹಾಗೂ ರಾಜಸ್ತಾನದ 200 ಸ್ಥಾನಗಳಿಗೆ ಜ.20ರಂದು ಮತದಾನ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೇ 27ರಂದು ಸಿಕ್ಕಿಂ (52 ವಿಧಾನಸಭಾ ಕ್ಷೇತ್ರ), ಜೂನ್ 1-ಅರುಣಾಚಲ ಪ್ರದೇಶ (60 ಸ್ಥಾನಗಳು), ಜೂನ್ 8-ತೆಲಂಗಾಣ (119), ಜೂನ್ 11-ಓಡಿಶಾ (147), ಹಾಗೂ ಜೂನ್ 18-ಆಂಧ್ರಪ್ರದೇಶ (175) ವಿಧಾನಸಭೆಗಳಿಗೆ ಚುನಾವಣೆ ಜರುಗಲಿದೆ ಎಂದು ಮೂಲಗಳು ಹೇಳಿವೆ.
ನವೆಂಬರ್ 2ರಂದು ಹರಿಯಾಣ (90) ಹಾಗೂ ನವೆಂಬರ್ 9ರಂದು ಮಹಾರಾಷ್ಟ್ರ (288) ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ.
ಲೋಕಸಭೆ ಮತ್ತು ಈ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಬಿಜೆಪಿ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿವೆ. ಎಲ್ಲ ಪಕ್ಷಗಳಲ್ಲಿ ಈಗಿನಿಂದಲೇ ಚುನಾವಣಾ ಮಹಾ ಸಮರದ ಸಿದ್ದತೆಗಳು ನಡೆಯುತ್ತಿವೆ.
ಸಂಭವನೀಯ ಚುನಾವಣಾ ವೇಳಾಪಟ್ಟಿ
ರಾಜ್ಯಗಳು ಸಂಭವನೀಯದಿನಾಂಕ ಕ್ಷೇತ್ರಗಳು
ಛತ್ತೀಸ್ಗಢ 05/01/2019 90
ಮಧ್ಯಪ್ರದೇಶ07/01/2019 230
ರಾಜಸ್ತಾನ 20/01/2019 200
ಸಿಕ್ಕಿಂ 27/05/2019 52
ಅರುಣಾಚಲಪ್ರದೇಶ01/06/2019 60
ತೆಲಂಗಾಣ 08/06/2019 119
ಒಡಿಶಾ 11/06/2019 147
ಆಂಧ್ರಪ್ರದೇಶ18/06/2019 175
ಹರಿಯಾಣ 02/11/2019 90
ಮಹಾರಾಷ್ಟ್ರ 09/11/2019 288