
ನವದೆಹಲಿ, ಜೂ.11- ಪ್ರಸಿದ್ಧ ಕೈಲಾಸ ಮಾನಸ ಸರೋವರ ಯಾತ್ರೆ-2018ರ ಮೊದಲ ತಂಡಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಇಂದು ಹಸಿರು ನಿಶಾನೆ ತೋರಿದರು.
ಮೊದಲ ತಂಡದಲ್ಲಿ 60 ಯಾತ್ರಿಕರು ಹಿಮಾಲಯದ ದುರ್ಗಮ ಮಾರ್ಗದ ಮೂಲಕ ಈ ಯಾತ್ರೆ ಕೈಗೊಳ್ಳುವರು. ಈ ವರ್ಷ ಒಟ್ಟು 1500 ಭಕ್ತರು ಅವಕಾಶ ಪಡೆದಿದ್ದಾರೆ.
ಕೈಲಾಸ ಮಾನಸ ಸರೋವರ ಯಾತ್ರೆ ಸುಖಕ ಮತ್ತು ಕ್ಷೇಮವಾಗಿರಲಿ. ಸುರಕ್ಷಿತವಾಗಿ ಹಿಂದಿರುಗಿ ಎಂದು ಯಾತ್ರಿಕರಿಗೆ ಸಚಿವರು ಶುಭ ಕೋರಿದರು.