
ಗುವಾಹತಿ, ಜೂ.11-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಇಂದು ರಿಕ್ಟರ್ ಮಾಪಕದಲ್ಲಿ 5.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಪ್ರಾದೇಶಿಕ ಭೂಗರ್ಭ ಅಧ್ಯಯನ ಕೇಂದ್ರ ತಿಳಿಸಿದೆ.
ಭೂಕಂಪದಿಂದ ಯಾವುದೇ ಸಾವು-ನೋವು ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.
ಮಧ್ಯಮ ತೀವ್ರತೆಯ ಭೂಕಂಪದ ಕೇಂದ್ರ ಬಿಂದು ನಾಗಾಂವ್ ಜಿಲ್ಲೆಯ ದಿಂಗ್‍ನಿಂದ 22 ಕಿ.ಮೀ. ದೂರದ ಶಿಲ್ಲಾಂಗ್‍ನಲ್ಲಿ ಇತ್ತು ಎಂದು ಕೇಂದ್ರ ಹೇಳಿದೆ.