
ಸಗ್ಮೆತ(ಛತ್ತಿಸಗಢ): ಛತ್ತಿಸಗಢದ ಸಗ್ಮೆತ ಪ್ರದೇಶದಲ್ಲಿ ಪೊಲೀಸರು ಮೂವರು ನಕ್ಸಲರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಒಂದು ಪಿಸ್ತೂಲು, ಜೀವಂತ ಗುಂಡುಗಳು, ಇನ್‌ಸಾಸ್ ರೈಫಲ್, ಟಿಫನ್ ಬಾಂಬ್ ಸೇರಿದಂತೆ ಸ್ಪೋಟಕಗಳು ಇವೆ.
ಛತ್ತಿಸಗಢದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರ ಗುಂಡಿಗೆ ನಕ್ಸಲ್‌ವೊಬ್ಬ ಶನಿವಾರ ಬಲಿಯಾಗಿದ್ದ.
ರಾಜ್ಯದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಪೊಲೀಸರ ಗುಂಡಿಗೆ ಕಳೆದ ಐದು ತಿಂಗಳಿನಲ್ಲಿ 51 ನಕ್ಸಲರು ಹತರಾಗಿದ್ದಾರೆ.