ನಿಲ್ಲದ ಬಿ.ಆರ್.ಟಿ.ಎಸ್. ಕಿರಿಕಿರಿ

ಹುಬ್ಬಳ್ಳಿ- ಹುಬ್ಬಳ್ಳಿ-ಧಾರವಾಡ ಮಧ್ಯ ನಡೆಯುತ್ತಿರುವ ಬಹುಕೋಟಿ ವೆಚ್ಚದ ಬಿ.ಆರ್.ಟಿ.ಎಸ್ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಅವಳಿ ನಗರದ ಜನತೆ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಇಂದು ಬಿ.ಆರ್.ಟಿಎಸ್ ಕಾಮಗಾರಿಯ ಮತ್ತೊಂದು ಕರಾಳ ದರ್ಶನವಾಗಿದೆ. ಹುಬ್ಬಳ್ಳಿಯ ನವನಗರದ ವಾಣಿಜ್ಯ ತೆರಿಗೆ ಇಲಾಖೆ ಬಳಿ 12ಕ್ಕು ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ. ವಿದ್ಯುತ್ ಕಂಬಗಳ ಕಾಮಗಾರಿ ಕಳಪೆಯಾಗಿದ್ದರಿಂದ, ನಿನ್ನೆ ಸುರಿದ ಮಳೆಗೆ ಮಣ್ಣು ಸಡಿಲಗೊಂಡು ಕಂಬಗಳು ಉರುಳಿದೆ. ಹೀಗಾಗಿ ವಾಣಿಜ್ಯ ತೆರಿಗೆ, ಆದಾಯ ತೆರಿಗೆ, ಅಬಕಾರಿ ಇಲಾಖೆ ಸಿಬ್ಬಂದಿಗಳ ವಾಹನಗಳು ಹೊರ ಬರಲಾಗದೆ ಕಚೇರಿಯಲ್ಲಿ ಉಳಿದುಕೊಂಡಿದೆ. ಹೀಗಾಗಿ ಕಚೇರಿ ಕೆಲಸದ‌ ಮೇಲು ಪರಿಣಾಮ ಬೀರಿದೆ. ಬಿ ಆರ್ ಟಿಎಸ್ ಕಾಮಗಾರಿಯಿಂದ ಒಂದಿಲ್ಲ ಒಂದು ಸಮಸ್ಯೆ ಆಗುತ್ತಿದ್ದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಈ ಕಾಮಗಾರಿ ಯಾವಾಗ ಮುಗಿಯುತ್ತಪ್ಪ ಅಂತ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಇಷ್ಟೆಲ್ಲ ಅವಾಂತರ ಸೃಷ್ಟಿಯಾದರು ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತ್ತಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ