
ನವದೆಹಲಿ: ತನ್ನ ವ್ಯವಸ್ಥಾಪನಾ ಮಂಡಳಿಗೆ ಸರಿಯಾ ನಾಯರ್ ಅವರನ್ನು ನೇಮಕ ಮಾಡಿರುವುದಾಗಿ ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯೂಇಎಫ್) ಶುಕ್ರವಾರ ತಿಳಿಸಿದೆ.
ವಿಶ್ವ ಆರ್ಥಿಕ ವೇದಿಕೆಯ ಎಲ್ಎಲ್ ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಒಒ)ಯಾಗಿರುವ ಸರಿತಾ ನಾಯರ್ ಅವರಿಗೆ ಈಗ ಹೆಚ್ಚುವರಿಯಾಗಿ ವ್ಯವಸ್ಥಾಪನಾ ಮಂಡಳಿಯ ಜವಾಬ್ದಾರಿ ನೀಡಲಾಗಿದೆ.
ನಾಯರ್ ಅವರು ವ್ಯವಸ್ಥಾಪನಾ ಮಂಡಳಿ ಮೂಲಕ ವಿಶ್ವ ಆರ್ಥಿಕ ವೇದಿಕೆಯ ಅಂತರಾಷ್ಟ್ರೀಯ ವಿಸ್ತರಣೆಗೆ ನೆರವಾಗಲಿದ್ದಾರೆ. ಅಲ್ಲದೆ ಭಾರತ, ಜಪಾನ್ ಮತ್ತು ಚೀನಾ ದಲ್ಲಿ ವಿಶ್ವ ಆರ್ಥಿಕ ವೇದಿಯ ಹೊಸ ಕೇಂದ್ರಗಳ ಸ್ಥಾಪನೆಗೆ ನಾಯರ್ ನೇತೃತ್ವ ವಹಿಸಿಕೊಳ್ಳಲಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪನಾ ಮಂಡಳಿಗೆ ನೇಮಕಗೊಂಡಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಉದಯೋನ್ಮುಖ ತಂತ್ರಜ್ಞಾನಗಳ ಪ್ರಯೋಜನಗಳನ್ನು ಗರಿಷ್ಠಗೊಳಿಸಲಾಗುವುದು, ಇದು ಅಪಾಯಗಳನ್ನು ಕಡಿಮೆಗೊಳಿಸುತ್ತದೆ, ಇದರಿಂದಾಗಿ ಫೋರಂ ವಿಮರ್ಶಾತ್ಮಕವಾಗಿ ಕೆಲಸ ಮಾಡುತ್ತದೆ ಎಂದು ನಾಯರ್ ಅವರು ಹೇಳಿದ್ದಾರೆ.