ಪದವೀಧರರ ಮತ್ತು ಶಿಕ್ಷಕರ 6 ಕ್ಷೇತ್ರಗಳಲ್ಲಿ ಮತದಾನ ಆರಂಭ

ಬೆಂಗಳೂರು: ಮೂರು ಪದವೀಧರ ಕ್ಷೇತ್ರಗಳು ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳಿಂದ ಒಟ್ಟು 6 ಜನರನ್ನ ಪರಿಷತ್​ಗೆ ಆಯ್ಕೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಇವತ್ತು ರಾಜ್ಯದ ಹಲವೆಡೆ ಮತದಾನ ನಡೆಯುತ್ತಿದೆ. ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲೂ ಇವತ್ತೇ ಮತದಾನ ನಡೆಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು, ಮಂಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ಬೆಳಗ್ಗೆ 7ಗಂಟೆಗೆ ಮತದಾನ ಪ್ರಾರಂಭವಾಗಿದೆ.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಡೆಯಲಿದೆ. ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ದಾವಣೆಗೆರೆಯ ಕೆಲ ತಾಲೂಕುಗಳಲ್ಲಿ ಮತದಾನ ನಡೆಯಲಿದೆ. ಇದೇ ವೇಳೆ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲೂ ಇಂದೇ ಮತದಾನ ನಡೆಯುತ್ತಿದೆ.
ಇಂದಿನ ಮತದಾನ ಕ್ಷೇತ್ರಗಳು:
ಆಗ್ನೇಯ ಶಿಕ್ಷಕರ ಕ್ಷೇತ್ರ
ದಕ್ಷಿಣ ಶಿಕ್ಷಕರ ಕ್ಷೇತ್ರ
ನೈಋತ್ಯ ಶಿಕ್ಷಕರ ಕ್ಷೇತ್ರ
ನೈಋತ್ಯ ಪದವೀಧರರ ಕ್ಷೇತ್ರ
ಬೆಂಗಳೂರು ಪದವೀಧರರ ಕ್ಷೇತ್ರ
ಈಶಾನ್ಯ ಪದವೀಧರರ ಕ್ಷೇತ್ರ

——–
ಆಗ್ನೇಯ ಶಿಕ್ಷಕರ ಕ್ಷೇತ್ರ
ಕಣದಲ್ಲಿರುವ ಅಭ್ಯರ್ಥಿಗಳು
ಬಿಜೆಪಿ: ವೈ.ಎ.ನಾರಾಯಣಸ್ವಾಮಿ
ಜೆಡಿಎಸ್: ರಮೇಶ್ ಬಾಬು
ಕಾಂಗ್ರೆಸ್: ಎಂ.ರಾಮಪ್ಪ
ಪಕ್ಷೇತರರು: ಕೆ.ಜೆ.ತಿಮ್ಮಾರೆಡ್ಡಿ, ಪ್ರೊ ಬಿ.ಜಯಪ್ಪ, ಡಾ.ಕೆ.ನಾಗರಾಜ್, ಮಂಜುಳಾ ರಾಜಗೋಪಾಲ್, ರಮೇಶ್ ಬಾಬು, ರಮೇಶ್ ಬಾಬು, ರಾಮಕೃಷ್ಣ, ಪಿ.ಸಿ.ಲೋಕೇಶ್, ಎಂ.ವೆಂಕಟೇಗೌಡ, ಪಿ.ಶಕುಂತಲಾ. ಪಿ.ಸೋಮೇಶ್.

ಜಿಲ್ಲಾ ವ್ಯಾಪ್ತಿ – ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ,

ಮತಗಳ ವಿವರ
ಒಟ್ಟು ಮತದಾರರು: 19,402
ಪುರುಷರು: 13,461
ಮಹಿಳೆಯರು: 5,940
ತೃತಿಯ ಲಿಂಗ: 1

——

ದಕ್ಷಿಣ ಶಿಕ್ಷಕರ ಕ್ಷೇತ್ರ:

ಕಣದಲ್ಲಿರುವ ಅಭ್ಯರ್ಥಿಗಳು
ಕಾಂಗ್ರೆಸ್: ಎಂ.ಲಕ್ಷ್ಮಣ್
ಜೆಡಿಎಸ್: ಮರಿತಿಬ್ಬೇಗೌಡ
ಬಿಜೆಪಿ: ನಿರಂಜನಮೂರ್ತಿ
ಪಕ್ಷೇತರರು: ಎ.ಹೆಚ್.ಗೋಪಾಲಕೃಷ್ಣ, ಡಿ.ಕೆ.ತುಳಸಪ್ಪ, ಡಾ.ಎಸ್.ಬಿ.ಎಂ. ಪ್ರಸನ್ನ, ಡಾ.ಮಹಾದೇವ, ಎಂ.ಎನ್ ರವಿಶಂಕರ್, ಪಿ.ಎ.ಶರತ್ ರಾಜ್

ಜಿಲ್ಲಾ ವ್ಯಾಪ್ತಿ – ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ,

ಮತದಾರರ ವಿವರ
ಒಟ್ಟು ಮತದಾರರು: 20678
ಪುರುಷರು: 12938
ಮಹಿಳೆಯರು: 7735
ತೃತೀಯ ಲಿಂಗ: 5

—–
ನೈರುತ್ಯ ಶಿಕ್ಷಕರ ಕ್ಷೇತ್ರ

ಕಣದಲ್ಲಿರುವ ಅಭ್ಯರ್ಥಿಗಳು
ಬಿಜೆಪಿ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಕಾಂಗ್ರೆಸ್: ಕೆ.ಕೆ.ಮಂಜುನಾಥ್
ಜೆಡಿಎಸ್: ಎಸ್.ಎಲ್ ಬೋಜೇಗೌಡ
ಪಕ್ಷೇತರರು: ಡಾ.ಅರುಣ್ ಹೊಸಕೊಪ್ಪ, ಅಲೋಶಿಯಸ್ ಡಿಸೋಜಾ, ಕೆ.ಬಿ.ಚಂದ್ರೋಜಿರಾವ್, ಡಿ.ಕೆ.ತುಳಸಪ್ಪ, ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಭುಲಿಂಗ ಬಿ.ಆರ್., ಬಸವರಾಜಪ್ಪ ಕೆ.ಸಿ., ಎಂ.ರಮೇಶ್, ರಾಜೇಂದ್ರ ಕುಮಾರ್ ಕೆ.ಪಿ.

ಜಿಲ್ಲಾ ವ್ಯಾಪ್ತಿ – ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು

ಮತದಾರರ ವಿವರ:
ಒಟ್ಟು ಮತದಾರರು: 20,445
ಪುರುಷರು: 10926
ಮಹಿಳೆಯರು: 9514
ತೃತಿಯ ಲಿಂಗ: 5

——-
ನೈರುತ್ಯ ಪದವೀಧರ ಕ್ಷೇತ್ರ

ಕಣದಲ್ಲಿರುವ ಅಭ್ಯರ್ಥಿಗಳು:
ಬಿಜೆಪಿ: ಆಯನೂರು ಮಂಜುನಾಥ
ಕಾಂಗ್ರೆಸ್: ಎಸ್.ಪಿ.ದಿನೇಶ್
ಜೆಡಿಎಸ್: ಅರುಣ ಕುಮಾರ್

ಜಿಲ್ಲಾ ವ್ಯಾಪ್ತಿ – ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು

ಮತದಾರರ ವಿವರ:
ಒಟ್ಟು ಮತದಾರರು: 67,306
ಪುರುಷರು – 39125
ಮಹಿಳೆಯರು – 28157

—-
ಈಶಾನ್ಯ ಪದವೀಧರ ಕ್ಷೇತ್ರ

ಕಣದಲ್ಲಿರುವ ಅಭ್ಯರ್ಥಿಗಳು
ಕಾಂಗ್ರೆಸ್: ಡಾ. ಚಂದ್ರಶೇಖರ್ ಪಾಟೀಲ್
ಬಿಜೆಪಿ: ಕೆ.ಬಿ.ಶ್ರೀನಿವಾಸ್
ಜೆಡಿಎಸ್: ಪ್ರತಾಪರೆಡ್ಡಿ
ವಾಟಾಳ್ ಪಕ್ಷ: ವಾಟಾಳ್ ನಾಗರಾಜ್
ಪಕ್ಷೇತರರು: ಡಾ. ರಜಾಕ್ ಉಸ್ತಾಕ್

ಜಿಲ್ಲಾ ವ್ಯಾಪ್ತಿ: ಕಲ್ಬುರ್ಗಿ, ಬಳ್ಳಾರಿ, ರಾಯಚೂರು, ಬೀದರ, ಕೊಪ್ಪಳ, ಯಾದಗಿರಿ.

ಮತದಾರರ ವಿವರ
ಒಟ್ಟು ಮತದಾರರು: 82,054
ಪುರುಷರು          57852
ಮಹಿಳೆಯರು    24194
ತೃತೀಯ ಲಿಂಗ 8

——-
ಬೆಂಗಳೂರು ಪದವೀಧರ ಕ್ಷೇತ್ರ

ಕಣದಲ್ಲಿರುವ ಅಭ್ಯರ್ಥಿಗಳು:
ಬಿಜೆಪಿ: ಅ ದೇವೆಗೌಡ
ಕಾಂಗ್ರೆಸ್: ರಾಮೋಜಿಗೌಡ
ಜೆಡಿಎಸ್: ಅಚ್ಚೇಗೌಡ ಶಿವಣ್ಣ
ಸಿಪಿಐ: ಪ್ರಕಾಶ ಕೆ.
ಭಾರತೀಯ ಜನತಾದಳ: ವಿ.ಸುರೇಶ್ ಬಾಬು

ಪಕ್ಷೇತರರು: ಒಟ್ಟು 17 ಮಂದಿ

ಜಿಲ್ಲಾ ವ್ಯಾಪ್ತಿ: ಬೆಂಗಳೂರು ನಗರ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮೀಣ, ರಾಮನಗರ,

ಮತದಾರರ ವಿವರ
ಒಟ್ಟು: 65,354
ಪುರುಷರು          38451
ಮಹಿಳೆಯರು    26891
ತೃತೀಯ ಲಿಂಗಿ 12

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ