ಮೈತ್ರಿ ಸರ್ಕಾರದಲ್ಲಿ ಶೋಷಿತ ಸಮುದಾಯಗಳ ನಾಯಕರಾದ ಸತೀಶ್ ಜಾರಕಿ ಹೊಳಿಯ ಕಡೆಗಣನೆ: ಮಾನವ ಬಂಧುತ್ವ ವೇದಿಕೆ ಅಸಮಾಧಾನ

 

ಬೆಂಗಳೂರು, ಜೂ.8- ಕರ್ನಾಟಕದ ಮೈತ್ರಿ ಸರ್ಕಾರ ಸಾಮಾಜಿಕ ನ್ಯಾಯವನ್ನು ಕಡೆಗಣಿಸಿ ಶೋಷಿತ ಸಮುದಾಯಗಳ ನಾಯಕರಾದ ಸತೀಶ್ ಜಾರಕಿ ಹೊಳಿಯನ್ನು ಸಚಿವ ಸಂಪುಟದಿಂದ ಕಡೆಗಳಿಸಿರುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಅನಂತ್ ನಾಯಕ್ ಎನ್. ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವಗಳಿಗೆ ತಿಲಾಂಜಲಿ ಇಟ್ಟಿದೆ. ಆ ಮೂಲಕ ಪ್ರಜಾಪ್ರಭುತ್ವವಾದಿ ಮನಸ್ಸುಗಳಿಗೆ ದ್ರೋಹ ಎಸಗಿದೆ ಎಂದು ಕಿಡಿಕಾರಿದರು.
ರಾಜ್ಯದ ಶೋಷಿತ ವರ್ಗಗಳ ನೇತರರಾದ ಸತೀಶ್ ಜಾರಕಿಹೊಳಿಯನ್ನು ಸಚಿವ ಸಂಪುಟದಿಂದ ದೂರವಿಟ್ಟ ಆ ದುಷ್ಟ ಶಕ್ತಿ ಯಾವುದು ಎಂದು ಸರ್ಕಾರ ಕೂಡಲೇ ಬಹಿರಂಗಪಡಿಸಬೇಕೆಂದರು.

ಕಾಂಗ್ರೆಸ್ ಪಕ್ಷ ಈ ಬಗ್ಗೆ ಜನತೆಯ ಬಳಿ ಕ್ಷಮೆಯಾಚಿಸಿ ಸತೀಶ್ ಜಾರಕಿಹೊಳಿ ಅವರಿಗೆ ಆದ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕ ಆರ್.ಜಯಕುಮಾರ್, ಕಾರ್ಯದರ್ಶಿ ಮೂಡನಹಳ್ಳಿ ನಾಗರಾಜ್, ಹಲಗೂರು ಶಿವರಾಜ್, ಕನಕಚಲ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ