ಬೆಂಗಳೂರಿನ ಹುಡುಗ ಜಾಗೃತ್ ವಿಶ್ವ ಕರಾಟೆಯಲ್ಲಿ ನಂ.2 ಸ್ಥಾನ

ಬೆಂಗಳೂರು : ಬೆಂಗಳೂರಿನ ಹುಡುಗ ಎಂ.ಪಿ.ಜಾಗೃತ್ ವಿಶ್ವದ ನಂ.2 ಕರಾಟೆ ಪಟುವಾಗಿ ಹೊರಹೊಮ್ಮಿದ್ದಾನೆ. ಜಾಗೃತ್ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ಕರಾಟೆ 1 ಯೂತ್ ಲೀಗ್ 14 ವರ್ಷಗಳಿಗಿಂತ ಕಿರಿಯರ ಪುರುಷರ ಕತಾ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾನೆ. ಈ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಮೂಲಕ ಜಾಗೃತ್ ವಿಶ್ವದಲ್ಲಿ ನಂ.2 ರ್ಯಾಂಕಿಂಗ್ ಪಡೆದಿದ್ದಾನೆ. ಈಗ ಜಾಗೃತ್ 74 ದೇಶಗಳ 1,870 ಅಭ್ಯರ್ಥಿಗಳು ಭಾಗವಹಿಸಿದ್ದು ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೊದಲ ಭಾರತೀಯನೆಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾನೆ.

ಜಾಗೃತ್ ಹಲವು ಜಾಗತಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾನೆ. ಕಳೆದ ವರ್ಷ ಜಾಗೃತ್ ಕ್ರೊಯೇಷಿಯಾದ ಉಮಾಗ್‍ನಲ್ಲಿ ನಡೆದ 10ನೇ ವಲ್ರ್ಡ್ ಕರಾಟೆ ಯೂಥ್ ಕಪ್-2017ರಲ್ಲಿ ಚಿನ್ನದ ಪದಕ(ಕತಾ)ಗೆದ್ದಿದ್ದಾನೆ. ಅಲ್ಲದೆ ಅಲ್ಲಿಯೇ ನಡೆದ 10ನೇ ವಲ್ರ್ಡ್ ಕರಾಟೆ ಯೂಥ್ ಕಪ್-2017ರಲ್ಲಿ ಕುಮಿತೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾನೆ; ಈ ಎರಡೂ ಪದಕಗಳನ್ನು ಗೆಲ್ಲುವ ಮೂಲಕ ಈ ಎರಡೂ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದ ಮೊದಲ ಆಟಗಾರ ಎನಿಸಿದ್ದಾನೆ.

ಈ ಕುರಿತು ಜಾಗೃತ್, `ವಿಶ್ವದಲ್ಲಿ ನಂ.2ನೇ ಸ್ಥಾನದಲ್ಲಿರುವುದು ನನಗೆ ಬಹಳ ಸಂತೋಷ ತಂದಿದೆ. ಆದರೆ ಒಲಂಪಿಕ್ಸ್‍ನಲ್ಲಿ ಭಾಗವಹಿಸಿ ನನ್ನ ದೇಶಕ್ಕೆ ಪದಕ ಗೆದ್ದು ತರುವುದು ನನ್ನ ಕನಸು. ಭಾರತದಲ್ಲಿ ಅಷ್ಟು ಮಾನ್ಯತೆ ಪಡೆಯದ ಈ ಮಾರ್ಷಲ್ ಆಟ್ರ್ಸ್ ಅನ್ನು ಭಾರತದಲ್ಲಿ ಜನಪ್ರಿಯಗೊಳಿಸಲು ಬಯಸಿದ್ದೇನೆ’ ಎಂದರು. ಜಾಗೃತ್ ತಂದೆ ಝೆನ್ ಸ್ಪೋಟ್ರ್ಸ್ ಅಂಡ್ ಫಿಟ್‍ನೆಸ್‍ನ ಮಾಸ್ಟರ್ ಟ್ರೈನರ್ ಮತ್ತು ಅಂತಾರಾಷ್ಟ್ರೀಯ ಕರಾಟೆ ಗೋಲ್ಡ್ ಮೆಡಲಿಸ್ಟ್ ಶ್ರೀ ಎಂ.ಜಿ. ಪ್ರಸಾದ್ ಅವರಿಗೆ ಈ ಪ್ರಯಾಣದಲ್ಲಿ ಉತ್ತೇಜನಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಎಂ.ಪಿ.ಜಾಗೃತ್ ಅಸಂಖ್ಯ ಸರಣಿ ಪ್ರಶಸ್ತಿಗಳನ್ನು ಗೆದ್ದಿದ್ದು ಮಕ್ಕಳಲ್ಲಿ ಕರಾಟೆಯ ಹೊಸ ಭರವಸೆಯಾಗಿದ್ದಾನೆ. ಜಾಗೃತ್ ತನ್ನ ಕರಾಟೆಯ ಆಸಕ್ತಿ ಕರಾಟೆ ಆಧರಿತ ಚಿತ್ರಗಳಿಂದ ಮೂಡಿಬಂದಿತು ಎನ್ನುತ್ತಾನೆ. ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಅಸಂಖ್ಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾನೆ.

ಜಾಗೃತ್ ಸಾಧನೆಗಳು
• ಜಾಗೃತ್ ಕ್ರೊಯೇಷಿಯಾದ ಉಮಾಗ್‍ನಲ್ಲಿ ನಡೆದ 10ನೇ ವಲ್ರ್ಡ್ ಕರಾಟೆ ಯೂಥ್ ಕಪ್-2017ರಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ.
• ವಲ್ರ್ಡ್ ಕರಾಟೆ ಫೆಡರೇಷನ್ ಕ್ರೊಯೇಷಿಯಾದಲ್ಲಿ ಆಯೋಜಿಸಿದ್ದ 9ನೇ ವಲ್ರ್ಡ್ ಕರಾಟೆ ಯೂಥ್ ಕಪ್-2016ರಲ್ಲಿ ಕಂಚಿನ ಪದಕ ಗೆದ್ದಿದ್ದಾನೆ.
• ಕಾಮನ್‍ವೆಲ್ತ್ ಕರಾಟೆ ಫೆಡರೇಷನ್ ಆಯೋಜಿಸಿದ್ದ ಕಾಮನ್‍ವೆಲ್ತ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದಿದ್ದಾನೆ. ಈ ಚಾಂಪಿಯನ್‍ಶಿಪ್‍ನಲ್ಲಿ 18 ದೇಶಗಳು ಭಾಗವಹಿಸಿದ್ದವು.
• ವಲ್ರ್ಡ್ ಶಿಟೊ-ರ್ಯು ಅಸೊಸಿಯೇಷನ್ ಆಯೋಜಿಸಿದ್ದ 14ನೇ ಏಷ್ಯಾ ಪೆಸಿಫಿಕ್ ಶಿಟೊ-ರ್ಯು ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾನೆ.
• 2015ರಲ್ಲಿ ಕತಾ ನ್ಯಾಷನಲ್ಸ್‍ನಲ್ಲಿ ಮತ್ತು ಚಿನ್ನದ ಪದಕ; ಕುಮಿತೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾನೆ
• ಕೆಎಐ ನ್ಯಾಷನಲ್ ಕರಾಟೆ ಚಾಂಪಿಯನ್‍ಶಿಪ್‍ನ ಸಬ್-ಜೂನಿಯರ್ ಕೆಡೆಟ್‍ನಲ್ಲಿ ಸತತ 3 ವರ್ಷಗಳು ಕತಾದಲ್ಲಿ ರಾಷ್ಟ್ರೀಯ ಚಾಂಪಿಯನ್
• ಕರ್ನಾಟಕದ ಸಬ್-ಜೂನಿಯರ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ 5 ಸತತ ವರ್ಷಗಳು ಕತಾ ಮತ್ತು ಕುಮಿತೆಯಲ್ಲಿ ರಾಜ್ಯ ಚಾಂಪಿಯನ್
• 2015ರಲ್ಲಿ ವಾರ್ಷಿಕ ಕ್ರೀಡಾದಿನದಂದು ಶಾಲೆಯಲ್ಲಿ 10 ವರ್ಷಕ್ಕಿಂತ ಕಿರಿಯರ ಆಲ್ ರೌಂಡ್ ಚಾಂಪಿಯನ್‍ಶಿಪ್ ಪ್ರಶಸ್ತಿ
• ಕತಾ ಮತ್ತು ಕುಮಿತೆ ವಿಭಾಗದಲ್ಲಿ ಭಾರತ ಮತ್ತು ವಿದೇಶದಲ್ಲಿ 50ಕ್ಕೂ ಹೆಚ್ಚು ಕರಾಟೆ ಚಾಂಪಿಯನ್‍ಶಿಪ್‍ಗಳಲ್ಲಿ ಭಾಗಿ
• ಹೈದರಾಬಾದ್‍ನ ಗಚ್ಚಿಬೌಲಿಯಲ್ಲಿ ನಡೆದ 6ನೇ ದಕ್ಷಿಣ ಭಾರತ ಜಿಮ್ನಾಸ್ಟಿಕ್ಸ್ ಚಾಂಪಿಯನ್‍ಶಿಪ್-2013ರಲ್ಲಿ ಕರ್ನಾಟಕದ ಪ್ರತಿನಿಧಿ
• ಕಳೆದ 5 ವರ್ಷಗಳಿಂದ ಝೆನ್ ಸ್ಪೋಟ್ರ್ಸ್ ಅಂಡ್ ಫಿಟ್‍ನೆಸ್‍ನ ಮಾಸ್ಟರ್ ಟ್ರೈನರ್ ಶ್ರೀ ಎಂ.ಜಿ.ಪ್ರಸಾದ್ ಅವರಿಂದ 5 ವರ್ಷಗಳಿಂದ ತರಬೇತಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ