ಶಿರಸಿ:
ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ನಡೆದು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದೇ ಅಂತೂ ಈಗ ಒಂದು ಸರ್ಕಾರ ಬಂದತಾಗಿದೆ. ಸರ್ಕಾರ ಬಂತಲ್ಲ ಎಂದು ಜನ ನಿಟ್ಟುಸಿರು ಬಿಟ್ಟಿದ್ದರು, ಈಗಾಗಲೇ 20-22 ದಿನ ಕಳೆದರೂ ಸರ್ಕಾರದ ಅಸ್ತಿತ್ವವೇ ಇಲ್ಲದೇ ಯಾವುದಕ್ಕೂ ಪ್ರಯೋಜನವಿಲ್ಲದಂತಾಗಿದೆ. ಇಂಥಾ ಅವಕಾಶವಾದಿ ವ್ಯವಸ್ಥೆ ಕರ್ನಾಟಕದಲ್ಲಿ ಮಾತ್ರ ಸಾಧ್ಯವೇನೊ ಎಂದೆನ್ನಿಸುತ್ತಿದೆ. ಮಳೆಗಾಲ ಪ್ರಾರಂಭವಾಗಿ ಕೆಲವೆಡೆ ಅತಿವೃಷ್ಠಿಯಿಂದ ಅನಾಹುತಗಳಾದರೂ ಸರ್ಕಾರ ಇದ್ದೂ ಇಲ್ಲದೇ ಅಧಿಕಾರಿಗಳ ಅಡಳಿತವಾಗಿ ಪ್ರಯೋಜನವಿಲ್ಲದಂತಾಗಿದೆ. . . . . ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಮಂತ್ರಿಗಿರಿಗೆ ಎಲ್ಲರೂ ಲಾಬಿ ನಡೆಸಿ ಅಲ್ಪಾಯುಷಿ ಸರ್ಕಾರದಲ್ಲಿ ಹೇಗಾದರೂ ಮಂತ್ರಿಯಾಗಿ ಮಜಾ ಉಡಾಯಿಸೋಣ ಎಂಬ ಪ್ರಯತ್ನ ನಡೆಸಿದ್ದಾರೆ. ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 3 ದಿನವಾದರೂ ಖಾತೆ ಹಂಚಿಕೆಯಾಗಿಲ್ಲ. ಖಾತೆಗೆ ಖ್ಯಾತೆ ಆರಂಭವಾಗಿದ್ದು ನೋಡಿದರೆ ಇವರು ಜನಪರವಾಗಿ ಆಡಳಿತ ನಡೆಸಲು ಬಂದಿಲ್ಲ ಎಲ್ಲವೂ ತಮ್ಮ ಸ್ವ ಪ್ರತಿಷ್ಠೆಗೆ ಎಂಬಂತೆ ಕಾಣುತ್ತಿದೆ. ಕೇವಲ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರದಿಂದ ಹೊರಗಿಡಬೇಕೆಂಬ ಒಂದೇ ಉದ್ಧೇಶದಿಂದ ಸಮ್ಮಿಶ್ರ ಸರ್ಕಾರ ಮಾಡಿ ಈಗ ಸ್ವ ಪ್ರತಿಷ್ಠೆಗಾಗಿ ಜನತೆಯ ಸಹನೆಯನ್ನು ಪರೀಕ್ಷಿಸುತ್ತಿದ್ದಾರೆ ಇನ್ನಾದರೂ ಜನರು ಬಂಡೇಳುವ ಮುನ್ನ ಸಮ್ಮಿಶ್ರ ಸರ್ಕಾರದ ಮುಖಂಡರುಗಳು ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಹೇಳಿಕೆಗಳಿಗೆ ಬದ್ದರಾಗಿ ಜನಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸಲಿ. ಯಾರದ್ದೋ ಮುಲಾಜಿಗೆ ಬಿದ್ದು, ಬೇರೊಬ್ಬರ ಮೇಲೆ ಬೊಟ್ಟು ತೋರಿಸಿ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಜನಪರ ನಿಲುವನ್ನು ತಾಳಲಿ ಎಂದು ಆಗ್ರಹಿಸುತ್ತೇನೆ. ಕಳೆದ 40 ವರ್ಷಗಳಿಂದ ಜಿಲ್ಲಾಡಳಿತ ನಡೆಸುತ್ತಿರುವವರ ಬಗ್ಗೆ ಮಾತನಾಡದೇ ಕೇವಲ ರಾಜಕೀಯ ಉದ್ದೇಶಕ್ಕಾಗಿಯೇ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ಸತತವಾಗಿ ಅಧಿಕಾರದಲ್ಲಿರುವವರ ಬಗ್ಗೆಯೂ ಸಹ ಚಿಂತಿಸುವಂತಾಗಲಿ ಎಂದು ಶಿರಸಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ರಮಾಕಾಂತ ಹೆಗಡೆ ಆಗ್ರಹಿಸಿದ್ದಾರೆ